ಮಡಿಕೇರಿ, ಸೆ. ೨೬ : ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರು ನೃತ್ಯದೊಂದಿಗೆ ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದರು.
ಮAಗಳೂರಿನ ಹೆಜ್ಜೆನಾದ ತಂಡದವರು ವೈವಿಧ್ಯಮಯ ನೃತ್ಯ ಹಾಗೂ ಹಾಡುಗಳೊಂದಿಗೆ ಪ್ರೇಕ್ಷಕರ ಗಮನ ಸೆಳೆದರು. ಮಡಿಕೇರಿಯ ಕೂರ್ಗ್ ಸನ್ ರೈಸ್ ತಂಡದವರು ಖ್ಯಾತ ಹಿನ್ನೆಲೆ ಗಾಯಕ ದಿ.ಡಾ. ಎಸ್‌ಪಿ. ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಎಸ್.ಪಿ.ಬಿ. ಅವರ ಹಾಡುಗಳನ್ನು ಹಾಡಿ ರಂಜಿಸಿದರು. ವೀರಾಜಪೇಟೆಯ ನಾಟ್ಯ ಮಯೂರಿ ತಂಡ, ಸುಳ್ಯದ ಸುಗಿಪು ಜಾನಪದ ತಂಡದವರು ವೈವಿಧ್ಯಮಯ ನೃತ್ಯ ಪ್ರದರ್ಶನ ಮಾಡಿದರು. ನಾಪೋಕ್ಲುವಿನ ಓಂಕಾರ್ ಮ್ಯೂಸಿಕ್ ತಂಡದವರು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರೆ, ಟೀಂ ೭ ತಂಡದ ಬಾಲಕಿಯರು, ಬಾಲಕರ ಬಾಲಮಂದಿರದ ಬಾಲಕರು ನೃತ್ಯ