ಕಡಂಗ, ಸೆ. ೨೮: ಮಹಿಯದ್ದಿನ್ ಕುಟ್ಟಿ ಉಸ್ತಾದ್ ಅವರ ನೇತೃತ್ವದಲ್ಲಿ ತ್ರೆöÊಮಾಸಿಕ ಅಸ್ಮಹುಲ್ ಹುಸ್ನಾ ಮಜ್ಲಿಸ್ ಇತ್ತೀಚೆಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹಿರಿಯ ಧಾರ್ಮಿಕ ಗುರುಗಳು ನೆರವೇರಿಸಿದರು.

ಕಾರ್ಯಕ್ರಮದ ಸ್ವಾಗತವನ್ನು ಬದ್ರಿಯಾ ಜುಮಾ ಮಸೀದಿ ಮುದರಿಸ್ ಸ್ವಾಧಿಕ್ ಸಕಾಫಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಪೊನ್ನಣ್ಣ ಮಾತನಾಡಿ, ಎಲ್ಲಾ ಧರ್ಮವನ್ನು ಗೌರವಿಸಬೇಕು ಹಾಗೂ ಜನರ ಕಷ್ಟಗಳಿಗೆ ಸ್ಪಂದನ ನೀಡುವುದೇ ನಿಜವಾದ ಧರ್ಮದ ತತ್ವ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಅಸ್ಮಾಹುಲ್ ಹುಸ್ನಾ ಮಜ್ಲಿಸ್‌ಗೆ ಮುಯ್ಯದ್ದಿನ್ ಕುಟ್ಟಿ ಉಸ್ತಾದ್ ಅವರು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರಫೀಕ್, ಲತೀಫಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಉಸ್ಮಾನ್ ಕೆ.ಇ., ಅಬ್ದುಲ್ಲ, ಸುಬೇರ್ ಸಿ.ಇ., ಶಾಫಿ, ಮೊಹಮ್ಮದ್ ಎಡಪಾಲ ರಾಶಿದ್ ಯು.ಇ., ಅಬ್ದುಲ್ ರಹಮಾನ್, ಅಶ್ರಫ್ ಎಮ್ಮೆಮಾಡು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಮೈಸಿ ಕತ್ತಣಿರ ನಿರ್ವಹಿಸಿದರು. ಕೊನೆಯಲ್ಲಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.