ಮಡಿಕೇರಿ, ಸೆ. ೨೮: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ನಗರಸಭೆ ಕನ್ನಡ ಸಾಹಿತ್ಯ ಪರಿಷತ್ತು, ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ೧೫೬ ನೇ ಜನ್ಮ ವರ್ಷಾಚರಣೆಯು ಅಕ್ಟೋಬರ್ ೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ.
ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರö್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ ಸಹಬಾಳ್ವೆ, ಅಸ್ಪçಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಒಟ್ಟು ೩ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಮೂರು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ೩ ಸಾವಿರ ರೂ. ದ್ವಿತೀಯ ೨ ಸಾವಿರ ರೂ ಹಾಗೂ ತೃತೀಯ ಸ್ಥಾನಕ್ಕೆ ೧ ಸಾವಿರ ರೂ ನಗದು ಬಹುಮಾನ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
ಪ್ರೌಢಶಾಲಾ ವಿಭಾಗ;- ಪಿ.ಎಸ್. ಯಶಸ್ವಿ (ಪ್ರಥಮ) ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಾಕತ್ತೂರು ಮಡಿಕೇರಿ ತಾಲ್ಲೂಕು, ಕೆ.ಆರ್. ಲಿಪೀಕ್ಷಾ (ದ್ವಿತೀಯ) ೯ನೇ ತರಗತಿ, ಡಿ ವಿಭಾಗ ಸಂತ ಮೈಕಲರ ಪ್ರೌಢಶಾಲೆ, ಮಡಿಕೇರಿ, ಡಿ.ಎಂ. ಚರಿತ (ತೃತೀಯ) ೯ನೇ ತರಗತಿ, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ, ಸೋಮವಾರಪೇಟೆ.
ಪದವಿ ಪೂರ್ವ ವಿಭಾಗದಿಂದ :- ಬಿ.ಆರ್. ನವ್ಯ (ಪ್ರಥಮ) ಮೂರ್ನಾಡು ಪದವಿ ಪೂರ್ವ ಕಾಲೇಜು, ಮೂರ್ನಾಡು, ಎ.ಆರ್. ಮೋಕ್ಷಾ (ದ್ವಿತೀಯ) ಸರ್ಕಾರಿ ಪದವಿ ಪೂರ್ವ ಕಾಲೇಜು, ಮಡಿಕೇರಿ, ಯು.ಎನ್ ಚಂದನ (ತೃತೀಯ) ಲಯನ್ಸ್ ಪಿ.ಯು. ಕಾಲೇಜು, ವೀರಾಜಪೇಟೆ.
ಪದವಿ/ ಸ್ನಾತಕೋತ್ತರ ಪದವಿ ವಿಭಾಗದಿಂದ :- ಯು.ಆರ್. ರಕ್ಷಿತ್ ಕುಮಾರ್ (ಪ್ರಥಮ), ತೃತೀಯ ಬಿಸಿ.ಎ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ, ಎಸ್.ಮಂಜುಳ (ದ್ವಿತೀಯ) ತೃತೀಯ ಬಿ.ಸಿ.ಎ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ, ಕೀರ್ತನ (ತೃತೀಯ) ತೃತೀಯ ಬಿ.ಎ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಇವರು ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.