ಸಿದ್ದಾಪುರ, ಸೆ. ೨೮: ಶ್ರೀ ಮಹಾಗಣಪತಿ ಮಿತ್ರ ಮಂಡಳಿ ಪ್ರತಿಷ್ಠಾಪಿಸಿದ್ದ ೧೬ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವವು ಸರ್ವ ಧರ್ಮಿಯರ ಉಪಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಅದ್ದೂರಿಯಾಗಿ ನೆರವೇರಿತು.

ವಿದ್ಯುತ್ ಅಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೊಣನೂರು ನಿತೀಶ್ ಸೌಂಡ್ಸ್ ಆಂಡ್ ಲೈಟ್ಸ ಡಿ.ಜೆ. ಸಂಗೀತದೊAದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪುಣ್ಯ ಕಾವೇರಿ ನದಿಯಲ್ಲಿ ವಿಸರ್ಜಿಲಾಯಿತು.

ಸಂಘದ ಅಧ್ಯಕ್ಷ ಸಜಿಕುಮಾರ್, ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ವಿನು, ಸದಸ್ಯರಾದ ಪ್ರಶಾಂತ್, ತೋಮಸ್, ಶಿವರಾಜ್, ಸುನಿ, ಜೀವನ್, ಮಂಜೇಶ್ ನಾರಾಯಣ, ಪ್ರಕಾಶ ಹಾಜರಿದ್ದರು.