ಮಡಿಕೇರಿ, ಸೆ. ೨೮: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವು ಅಕ್ಟೋಬರ್ ೭ ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸಮೀಕ್ಷೆ ಕಾರ್ಯವನ್ನು ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಸುಗಮವಾಗಿ ನಿರ್ವಹಣೆ ಮಾಡುವ ಹಾಗೂ ಸಾರ್ವಜನಿಕರಿಂದ ಬರುವ ಮಾಹಿತಿ/ದೂರು/ ಆಕ್ಷೇಪಣೆ/ಸಲಹೆ ಇತ್ಯಾದಿ ಬಗ್ಗೆ ಸ್ವೀಕರಿಸಲಾಗುತ್ತಿರುವ ಕರೆಗಳಿಗೆ ಸೂಕ್ತ ಉತ್ತರವನ್ನು ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊAಡAತೆ ಸಹಾಯವಾಣಿ ತಂಡವನ್ನು ರಚಿಸಿ ಆದೇಶಿಸಿದೆ.

ಈ ತಂಡವು ಕಚೇರಿಯ ಅವಧಿಯಲ್ಲಿ ಕಚೇರಿಯ ಕೆಲಸದೊಂದಿಗೆ ಸಹಾಯವಾಣಿಯ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದೆ.

ಕೊಡಗು ಜಿಲ್ಲಾಮಟ್ಟದ ಸಹಾಯವಾಣಿ ಕೇಂದ್ರ: ಶಿವಶಂಕರ, ಕಚೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ. ದೂ.ಸಂ. ೯೮೪೫೦೪೧೩೩೮, ಕುಮಾರಿ.ಅಮೃತ ಡೇಟಾ ಎಂಟ್ರಿ ಆಪರೇಟರ್ (ಹೊ.ಸಂ) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ ದೂ.ಸಂ. ೭೪೮೩೮೬೪೧೯೦.

ಮಡಿಕೇರಿ ತಾಲೂಕುಮಟ್ಟದ ಸಹಾಯವಾಣಿ ಕೇಂದ್ರ: ಶ್ವೇತಾ, ಪ್ರಥಮ ದರ್ಜೆ ಸಹಾಯಕರು ದೂ.ಸಂ. ೯೪೮೧೭೭೧೬೧೨ ಹಾಗೂ .ಪದ್ಮವತಿ, ಡೇಟಾ ಎಂಟ್ರಿ ಆಪರೇಟರ್. (ಹೊ.ಸಂ) ದೂ.ಸಂ. ೯೦೦೮೧೯೫೭೧೯.

ಕುಶಾಲನಗರ ತಾಲೂಕುಮಟ್ಟದ ಸಹಾಯವಾಣಿ ಕೇಂದ್ರ: ಸುಕನ್ಯ, ನಿಲಯ ಮೇಲ್ವಿಚಾರಕರು ದೂ.ಸಂ. ೭೭೬೦೭೬೦೨೪೧ ಹಾಗೂ ಶರಣಪ್ಪ ಬಿರಾದರ, ಅಡುಗೆಯವರು ದೂ.ಸಂ. ೯೦೦೮೨೪೧೧೭೫.

ಸೋಮವಾರಪೇಟೆ ತಾಲೂಕುಮಟ್ಟದ ಸಹಾಯವಾಣಿ ಕೇಂದ್ರ: ಆನಂದ ವೈ.ಡಿ. ನಿಲಯ ಮೇಲ್ವಿಚಾರಕರು ದೂ.ಸಂ. ೮೧೦೫೨೬೧೧೮೫, ಶಿಲ್ಪ.ಟಿ.ಎಂ ಡೇಟಾ ಎಂಟ್ರಿ ಆಪರೇಟರ್ (ಹೊ.ಸಂ). ದೂ.ಸಂ. ೯೯೮೦೪೦೩೨೩೫.

ವೀರಾಜಪೇಟೆ ತಾಲೂಕುಮಟ್ಟದ ಸಹಾಯವಾಣಿ ಕೇಂದ್ರ: ನಾಗರಾಜು ಹೆಚ್.ಜೆ., ನಿಲಯ ಮೇಲ್ವಿಚಾರಕರು ದೂ.ಸಂ. ೯೮೪೪೫೩೧೦೪೦ ಹಾಗೂ ನಂದಿನಿ ಟಿ.ಡಿ, ಅಡುಗೆಯವರು ದೂ.ಸಂ. ೮೮೯೨೨೮೧೫೬೩.

ಪೊನ್ನಂಪೇಟೆ ತಾಲೂಕುಮಟ್ಟದ ಸಹಾಯವಾಣಿ ಕೇಂದ್ರ: ಶ್ರುತಿ ಮ್ಯಾಥ್ಯು. ಪ್ರಥಮ ದರ್ಜೆ ಸಹಾಯಕರು ದೂ.ಸಂ. ೯೬೦೬೧೨೭೪೧೭ ಹಾಗೂ ಶಾಕೀರ್, ಡಾಟಾ ಎಂಟ್ರಿ ಆಪರೇಟರ್.(ಹೊ.ಸಂ) ದೂ.ಸಂ. ೮೦೯೫೬೮೪೧೪೬ ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.