ಗೋಣಿಕೊಪ್ಪ ವರದಿ, ಸೆ. ೨೮: ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ವತಿಯಿಂದ ಸಿ.ಬಿ.ಎ.ಸ್.ಇ. ಅಂತರ್ ಶಾಲಾ ಪಾರ್ಲಿಮೆಂಟ್ ಕಾರ್ಯಕ್ರಮ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ನಡೆಯಿತು.

ಉತ್ತಮ ಮಾತುಗಾರಿಕೆಗೆ ಸೈನಿಕ ಶಾಲೆಯ ಎಚ್.ಜಿ. ಸಿದ್ಧಾಂತ್ ಪ್ರಥಮ, ಸೈನಿಕ ಶಾಲೆ ಮೈಯುಕ ದ್ವಿತೀಯ, ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ತಂಡ ಸ್ಥಾನ ಗಿಟ್ಟಿಸಿಕೊಂಡರು.

ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ದ್ವಿತೀಯ ಸ್ಥಾನ ಪಡೆದುಕೊಂಡಿತು. ಜಿಲ್ಲೆಯ ಸಿ.ಬಿ.ಎಸ್.ಇ. ಶಾಲೆಗಳಲಿ ೭ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಾಂಶುಪಾಲ ಕೂತಂಡ ಪುಷ್ಪ ಸುಬ್ಬಯ್ಯ ಪಾರ್ಲಿಮೆಂಟ್ ಪದದ ಬಗ್ಗೆ ವಿವರಣೆ ನೀಡಿದರು.

ಕುಟ್ಟಂಡ ಯಶ್ಮ ತಿಮ್ಮಯ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರೋಸಿ ರಾಣಿ ಪ್ರಾರ್ಥನೆ ನೆರವೇರಿತು.

ತೀರ್ಪುಗಾರರಾಗಿ ಪಾಲಿಬೆಟ್ಟ ಚೆಷೈರ್ ಹೋಂ ಆಡಳಿತ ಮಂಡಳಿ ಅಧ್ಯಕ್ಷೆ ಚೆಪ್ಪುಡಿರ ಗೀತಾ ಚಂಗಪ್ಪ, ಶಿಕ್ಷಕಿ ಆಶಾ ಮೋಹನ್, ವಕೀಲರಾದ ಬೊಳ್ಳಚಂಡ ಶೃಂಗಾ ಸೋಮಣ್ಣ ಭಾಗವಹಿಸಿದರು. ನೇಹಾಲ್ ತೆಕ್ಕಡೆ ಸ್ವಾಗತಿಸಿದರು. ಜಿ.ಕೆ. ವೀಕ್ಷ ವಂದಿಸಿದರು.