ಮಡಿಕೇರಿ, ಸೆ. ೨೮: ಕೊಡವ ಹಾಕಿ ಅಕಾಡೆಮಿಯಲ್ಲಿ ಇದೀಗ ಹೊಸತೊಂದು ಇತಿಹಾಸ ಸೃಷ್ಟಿಯಾಗಿದೆ. ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊAಡ ನಂತರದಲ್ಲಿ ರಚನೆಗೊಂಡಿದ್ದ ಕೊಡವ ಹಾಕಿ ಅಕಾಡೆಮಿಯ ಈ ತನಕದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಇದರ ಆಡಳಿತ ಮಂಡಳಿಗೆ ಚುನಾವಣೆ ಏರ್ಪಟ್ಟಿದ್ದು, ಈ ಚುನಾವಣೆಯಲ್ಲಿ ಕೌಟುಂಬಿಕ ಹಾಕಿ ಉತ್ಸವದ ಜನಕ ಎಂದೇ ಪ್ರತಿಬಿಂಬಿತವಾಗಿರುವ ಪಾಂಡAಡ ಕುಟಪ್ಪ ಅವರ ಪುತ್ರ ಹಾಲಿ ಅಧ್ಯಕ್ಷರಾಗಿದ್ದ ಪಾಂಡAಡ ಬೋಪಣ್ಣ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಇಡೀ ತಂಡ ಅಭೂತಪೂರ್ವ ಜಯಗಳಿಸುವ ಮೂಲಕ ಅಕಾಡೆಮಿಗೆ ಲಗ್ಗೆ ಹಾಕಿದೆ.

ಅಧ್ಯಕ್ಷ - ಕಾರ್ಯಾಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು ೧೫ ಸ್ಥಾನಗಳಿಗೂ ಚುನಾವಣೆ ನಡೆದಿದ್ದು, ಎಲ್ಲಾ ೧೫ ಸ್ಥಾನಗಳಿಗೂ ಬೋಪಣ್ಣ ನೇತೃತ್ವದ ತಂಡದ ಅಭ್ಯರ್ಥಿಗಳು ಜಯಗಳಿಸಿರುವುದು ವಿಶೇಷವಾಗಿದೆ.

ಮತ್ತೊಂದು ತಂಡವಾಗಿ ಸ್ಪರ್ಧಿಸಿದ್ದ ಹಾಲಿ ಕಾರ್ಯಾಧ್ಯಕ್ಷರಾಗಿದ್ದ ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದ ತಂಡದ ಅಭ್ಯರ್ಥಿಗಳು ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇನ್ನಿತರ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಕಳೆದ ೨೫ ವರ್ಷಗಳ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ೪೭೩ ಕೊಡವ ಕುಟುಂಬಗಳ ಪ್ರತಿನಿಧಿಗಳು ಈ ಚುನಾವಣೆಯಲ್ಲಿ ಮತದಾರರಾಗಿದ್ದರು. ೪೭೩ ಮತದಾರರ ಪೈಕಿ ೪೪೮ ಮತ ಅಂದರೆ ೪೪೮ ಕುಟುಂಬಗಳ ನಿಯೋಜಿತ ಪ್ರತಿನಿಧಿಗಳು ಭಾನುವಾರ ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿರುವುದೂ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟಕ್ಕೆ ಸಾಕ್ಷಿಯಂತಾಗಿತ್ತು. ಬೆಳಿಗ್ಗೆ ೧೦ ರಿಂದ ರಾತ್ರಿ ೮ ಗಂಟೆಯತನಕ ಚುನಾವಣಾ ಪ್ರಕ್ರಿಯೆ ಮುಂದುವರಿದಿದ್ದು, ವಿಜೇತರ ಆಯ್ಕೆ ಪ್ರಕಟಗೊಂಡಿತ್ತು.

ಯರ‍್ಯಾರು ಗೆಲುವು

ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಪಾಂಡAಡ ಬೋಪಣ್ಣ, ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಜಿ ಒಲಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ, ಮಡಿಕೇರಿ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ವೀರಾಜಪೇಟೆ ತಾಲೂಕಿನಿಂದ ಕೂತಂಡ ಸುರೇಶ್ ಅಪ್ಪಯ್ಯ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷರಾಗಿ ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಕಾರ್ಯದರ್ಶಿಯಾಗಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿಯಾಗಿ ನಾಯಕಂಡ ದೀಪು ಚಂಗಪ್ಪ ಚುನಾಯಿತರಾಗಿದ್ದಾರೆ. ೪ಆg (ಮೊದಲ ಪುಟದಿಂದ)

ನಿರ್ದೇಶಕರುಗಳಾಗಿ ಕಲಿಯಂಡ ಸಂಪನ್ ಅಯ್ಯಪ್ಪ, ಚೆಕ್ಕೆರ ಆದರ್ಶ್, ಬೊಳ್ಳೆಪಂಡ ಜೆ. ಕಾರ್ಯಪ್ಪ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಮಂಡೇಪAಡ ಮುಖೇಶ್ ಮೊಣ್ಣಯ್ಯ, ಮುದ್ದಂಡ ರಶಿನ್ ಸುಬ್ಬಯ್ಯ, ಮುಕ್ಕಾಟಿರ ಸೋಮಯ್ಯ ಹಾಗೂ ಮಹಿಳಾ ನಿರ್ದೇಶಕಿಯಾಗಿ ಕಂಬೀರAಡ ರಾಖಿ ಪೂವಣ್ಣ ಜಯಗಳಿಸಿದ್ದಾರೆ.

ಮೇಕೇರಿರ ರವಿ ಪೆಮ್ಮಯ್ಯ ಸೇರಿದಂತೆ ಈ ತಂಡದಿAದ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದ ಮಾದಂಡ ಪೆಮ್ಮಯ್ಯ, ಕಲ್ಲುಮಾಡಂಡ ತರುಣ್ ತಮ್ಮಣ್ಣ, ಮೀದೇರಿರ ಗನ್ನು ಸೋಮಣ್ಣ, ಬುಟ್ಟಿಯಂಡ ಚಂಗಪ್ಪ, ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ನೆರವಂಡ ಅನೂಪ್ ಉತ್ತಯ್ಯ, ಅಂಜಪರವAಡ ಕುಶಾಲಪ್ಪ, ಗುಮ್ಮಟ್ಟೀರ ಚಂಗಪ್ಪ, ಚಂದೂರ ಸುರೇಶ್ ತಿಮ್ಮಯ್ಯ, ಕುಂಞಯAಡ ನಿರನ್ ನಾಣಯ್ಯ, ಪಟ್ಟಮಾಡ ಪೊನ್ನಪ್ಪ, ಬಲ್ಟಿಕಾಳಂಡ ಸುಜಿತ್, ಕಾಂಡAಡ ರಶ್ಮಿ ಲಾಲಪ್ಪ ನಿರಾಶೆ ಅನುಭವಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿದ್ದ ಬಡಕಡ ದೀನಾ ಪೂವಯ್ಯ, ಶಾಂತೆಯAಡ ನಿರನ್ ನಾಚಪ್ಪ, ತೀತಿಮಾಡ ಸೋಮಣ್ಣ, ಚೇನಂಡ ಸುರೇಶ್ ಹಾಗೂ ಕೇಲೇಟಿರ ದೀಪು ಅವರುಗಳೂ ಸೋಲು ಕಂಡಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಚೋಕಿರ ಎಂ. ಪೂವಯ್ಯ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಕೌತುಕದ ಸ್ಪರ್ಧೆ ಏರ್ಪಟ್ಟ ಹಿನ್ನೆಲೆಯಲ್ಲಿ ವಿವಿಧ ಕುಟುಂಬಗಳ ಪ್ರಮುಖರು, ಅಭ್ಯರ್ಥಿಗಳ ಬೆಂಬಲಿಗರು, ಮಾಜಿ ಅಂತರರಾಷ್ಟಿçÃಯ, ರಾಷ್ಟಿçÃಯ, ರಾಜ್ಯ ಹಾಕಿ ತಂಡದಲ್ಲಿ ಆಡಿದ್ದ ಆಟಗಾರರು ತ್ರಿವೇಣಿ ಶಾಲೆಯಲ್ಲಿ ಕಂಡು ಬಂದರು. ಕುಟುಂಬವಾರು ಪ್ರತಿನಿಧಿಗಳು ಮತ ಚಲಾವಣೆಯ ಹಕ್ಕು ಹೊಂದಿದ್ದು ವಿಶೇಷವಾಗಿದ್ದು, ಒಂದು ರೀತಿಯ ಈ ಚುನಾವಣೆ ಹೊಸತೊಂದು ಅನುಭವ ಸೃಷ್ಟಿಸಿದಂತಿತ್ತು.