ಮಡಿಕೇರಿ, ಸೆ. ೨೮: ಮಡಿಕೇರಿ ದಸರಾ ಜನೋತ್ಸವದಲ್ಲಿಂದು ಮಹಿಳೆಯರದ್ದೇ ಕಲರವ. ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆ ಹಾಗೂ ಗಾಂಧಿಮೈದಾನ ವ್ಯಾಪ್ತಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಮಹಿಳೆಯರದ್ದೆ ಕಾರುಬಾರು. ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಳೆಯ ಅಡಚಣೆಯ ನಡುವೆಯೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ವಿಶೇಷ ಸ್ಪರ್ಧಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹಿಳಾ ದಸರಾದಲ್ಲಿ ಸಂಭ್ರಮಿಸಿದರು.
ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೮ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಸದಸ್ಯೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಂಸ್ಕೃತಿಕ ಸಮಿತಿ ವತಿಯಿಂದ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೀರೆಯ ನಿಖರ ಬೆಲೆ ಹೇಳುವುದು, ಬಾಂಬ್ ಇನ್ ದ ಸಿಟಿ, ಕೆರೆದಡ, ಮೆಹಂದಿ ಹಾಕುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಭಾರತೀಯ ೪ಆರನೇ ಪುಟಕ್ಕೆ (ಮೊದಲ ಪುಟದಿಂದ) ಸಾಂಪ್ರದಾಯಿಕ ಉಡುಗೆ ಪ್ರದರ್ಶನ, ಕೇಶವಿನ್ಯಾಸ ಮಾಡುವುದು, ಬಲೂನ್ ಮತ್ತು ಕಪ್ಪು, ಹಣ್ಣೆಯಲ್ಲಿಟ್ಟು ಬಿಸ್ಕೆಟ್ ತಿನ್ನುವುದು, ಜಾನಪದ ನೃತ್ಯ, ವಾಲಗ ಕುಣಿತ, ಬಲೂನನ್ನು ಕಾಲಲ್ಲಿ ಹಿಡಿದು ಓಡುವುದು, ದಸರಾ ಕುರಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಇವುಗಳೊಂದಿಗೆ ಮಹಿಳೆಯರೇ ವಿವಿಧ ಅಂಗಡಿ ಮಳಿಗೆಗಳನ್ನು ತೆಗೆದು ವ್ಯಾಪಾರ ವಹಿವಾಟು ನಡೆಸಿದರು. ಸದಾ ಕುಟುಂಬ ನಿರ್ವಹಣೆ, ವೃತ್ತಿಯ ಒತ್ತಡದೊಂದಿಗೆ ದಿನಕಳೆಯುತ್ತಿದ್ದ ಮಹಿಳೆಯರು ಎಲ್ಲವನ್ನು ಬದಿಗೊತ್ತಿ ಮಹಿಳಾ ದಸರಾದಲ್ಲಿ ಹರ್ಷೊಲ್ಲಾಸದಿಂದ ಭಾಗಿಯಾದರು.
‘ಉತ್ಸಾಹ ಬೆಳೆಸಿಕೊಳ್ಳಿ’
ಮಹಿಳಾ ದಸರಾವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಅವರು, ಮಹಿಳೆಯರಿಗಾಗಿ ನಡೆಯುವ ಮಹಿಳಾ ದಸರಾದಲ್ಲಿ ಮಹಿಳೆಯರು ಅತೀ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಬೇಕು ಎಂದು ಆಶಿಸಿದರು. ಮಹಿಳಾ ದಸರಾದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೆ ಹೋಗಬೇಕು ಎಂದು ನುಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಹಿಳೆಯರ ಪ್ರತಿಭೆಯನ್ನು ಹೊರಹಾಕಲು ಮಹಿಳಾ ದಸರಾ ಉತ್ತಮ ವೇದಿಕೆಯಾಗಿದ್ದು, ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲರೂ ಒಂದಾಗಿ ಮುಂದೆ ಸಾಗಬೇಕು ಎಂದರು ಹೇಳಿದರು.ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಮಾತನಾಡಿ, ಮಹಿಳಾ ದಸರಾ ಮಹಿಳೆಯರಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಗೌರವಿಸುವ ದಿನವಾಗಿದ್ದು, ಮಹಿಳಾ ದಸರಾ ಮಡಿಕೇರಿ ದಸರಾ ಉತ್ಸವದ ಅವಿಭಾಗ್ಯ ಅಂಗವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ ಮಾತನಾಡಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಅತೀ ಮುಖ್ಯ ಎಂದರು ಹೇಳಿದರು. ನಗರಸಭಾ ಸದಸ್ಯೆ ಸವಿತಾ ರಾಕೇಶ್ ಮಾತನಾಡಿ, ಮಹಿಳಾ ದಸರಾದಲ್ಲಿ ಮಹಿಳೆಯರು ಮುಕ್ತವಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು.
ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಸರಾ ಮಡಿಕೇರಿ ದಸರಾ ಉತ್ಸವದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಸಭೆ, ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತ, ಎಂ.ಎ. ರೋಹಿಣಿ, ಪಿ.ಯು. ಚೈತ್ರ, ಆಶಾ ಕಾರ್ಯಕರ್ತೆಯರಾದ ಹೆಚ್.ಎಂ. ಚಂದ್ರಾವತಿ, ಜೂರಬಿ, ಅನಿತಾ ರೈ, ಪೌರಕಾರ್ಮಿಕರಾದ ಡಿ. ಲಕ್ಷಿö್ಮ, ಕೆಂಗೇರಿ ಲಕ್ಷö್ಮಮ್ಮ, ಗಿರಿಜಮ್ಮ, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಸಿ. ಚಿನ್ನಮ್ಮ, ಕಸ್ತೂರಿ ಇವರುಗಳು ಸನ್ಮಾನದ ಗೌರವಕ್ಕೆ ಭಾಜನರಾದರು.
ವೇದಿಕೆಯಲ್ಲಿ ನಗರಸಭಾ ನಿವೃತ್ತ ಆಯುಕ್ತೆ ಪುಷ್ಪಾವತಿ, ಮುಡಾ ಸದಸ್ಯೆ ಮಿನಾಜ್ ಪ್ರವೀಣ್, ಒಡಿಪಿ ಸಂಸ್ಥೆ ಮುಖ್ಯಸ್ಥೆ ಜಾಯ್ಸ್ ಮೆನೆಜಸ್, ನಗರಸಭಾ ಸದಸ್ಯರುಗಳಾದ ಚಿತ್ರಾವತಿ, ಮಂಜುಳಾ, ಮೇರಿ ವೇಗಸ್, ಉಷಾ, ಜುಲೇಕಾಬಿ, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ, ಮಡಿಕೇರಿ ತಾಲೂಕು ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷೆ ಪುಷ್ಪ, ಪೊನ್ನಂಪೇಟೆ ತಾಲೂಕು ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ರಜನಿ ಮತ್ತಿತರರು ಉಪಸ್ಥಿತರಿದ್ದರು.
ತಕ್ಷಿತ ಮತ್ತು ತಂಡ ಸ್ವಾಗತ ನೃತ್ಯ ಮಾಡಿತು. ಪಿ. ಕಾವ್ಯ ಪ್ರಾರ್ಥಿಸಿದರು. ಚೋಕಿರ ಅನಿತಾ ದೇವಯ್ಯ, ಬಾಳೆಯಡ ದಿವ್ಯಾ ನಿರೂಪಿಸಿ, ದಸರಾ ಸಮಿತಿ ಖಜಾಂಚಿ ಸಬಿತಾ ಸ್ವಾಗತಿಸಿದರು. ಸೌಮ್ಯ ಶೆಟ್ಟಿ ವಂದಿಸಿದರು.