ಗೋಣಿಕೊಪ್ಪಲು, ಸೆ. ೨೯: ಗೋಣಿಕೊಪ್ಪಲುವಿನಲ್ಲಿ ದಸರಾ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಯುವ ದಸರಾ ಸಮಿತಿಯಿಂದ ಸೈಕಲ್ ರೇಸ್ ಹಾಗೂ ಬೈಕ್ ಸ್ಟಂಟ್ ಪ್ರದರ್ಶನ ಆಯೋಜಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಮೈಸೂರಿನ ಅಭಿಷೇಕ್, ಮಹೇಶ್ ಹಾಗೂ ಶ್ರೇಯಸ್ ನಡೆಸಿದ ಬೈಕ್ ಸ್ಟಂಟ್ ಕಂಡು ಜನ ಪುಳಕಿತರಾದರು. ವೀಲಿ, ಸ್ಟಾಪಿ ಸೇರಿದಂತೆ ಇನ್ನಿತರ ಕಸರತ್ತುಗಳನ್ನು ಸವಾರರು ನಡೆಸಿ ರೋಮಾಂಚನಕಾರಿ ಅನುಭವ ನೀಡಿದರು. ವಿಶೇಷವಾಗಿ ಯುವಸಮೂಹ ಬೈಕ್ ಸ್ಟಂಟ್ ವೀಕ್ಷಿಸಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿತ್ತು.
ಸೈಕಲ್ ರೇಸ್ : ದಸರಾ ವೇದಿಕೆಯ ಮುಂಭಾಗದಲ್ಲಿ ಸೈಕಲ್ ರೇಸ್ಗೆ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಚಾಲನೆ ನೀಡಿದರು. ೪ಏಳನೇ ಪುಟಕ್ಕೆವಿವಿಧ ವಯೋಮಾನದ ಮಕ್ಕಳಾದಿಯಾಗಿ ಹಿರಿಯರೂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ೧೫ ವರ್ಷದೊಳಗಿನ ವಿಭಾಗದಲ್ಲಿ ೪ ಕಿ.ಮೀ ಕ್ರಮಿಸುವ ಗುರಿ ನೀಡಲಾಗಿತ್ತು. ಮುಕ್ತ ವಿಭಾಗದಲ್ಲಿ ಕೈಕೇರಿ-ಕುಂದ ಮಾರ್ಗವಾಗಿ ಪೊನ್ನಂಪೇಟೆಗೆ ಸಾಗಿ ವಾಪಾಸ್ ಗೋಣಿಕೊಪ್ಪ ತಲುಪುವ ಗುರಿಯನ್ನು ನೀಡಲಾಗಿತ್ತು. ೧೫ ವರ್ಷದೊಳಗಿನ ವಿಭಾಗದಲ್ಲಿ ೪೦, ಮುಕ್ತ ವಿಭಾಗದಲ್ಲಿ ೨೮ ಮಂದಿ ಭಾಗವಹಿಸಿದ್ದರು.
ಸಮಿತಿ ವತಿಯಿಂದ ಸೈಕಲ್ ಸವಾರರ ಸುರಕ್ಷತೆಗೆ ಸೂಕ್ತ ಕ್ರಮವಹಿಸಲಾಗಿತ್ತು. ಆ್ಯಂಬ್ಯುಲೆನ್ಸ್ ವ್ಯವಸ್ಥೆಯೊಂದಿಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.
ವಿಜೇತರ ವಿವರ
೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬಿ.ಜೆ. ಕುಶಾಲಪ್ಪ ಪ್ರಥಮ, ವಿರನ್ ಸೋಮಣ್ಣ ದ್ವಿತೀಯ, ಕೌಶಿಕ್ ತೃತೀಯ ಸ್ಥಾನ ಪಡೆದರು.
ಬಾಲಕಿಯವರ ವಿಭಾಗದಲ್ಲಿ ವೇದಪ್ರಿಯ ಪಾಟೀಲ್ (ಪ್ರ), ಟಿ.ಎಂ. ವಂದನ (ದ್ವಿ), ಟಿ.ಎಂ. ರಿಶ್ವಿ (ತೃ). ಮುಕ್ತ ವಿಭಾಗದಲ್ಲಿ ಕೃತಿನ್ ಮಿತ್ತಿ (ಪ್ರ), ಕೃತಿಕ್ ಮಿತ್ತಿ (ದ್ವಿ), ಸಚಿನ್ ಕಾಂತ್ (ತೃ) ವಿಜೇತರಾದರು.
ಯುವ ದಸರಾ ಸಮಿತಿಯ ಅಧ್ಯಕ್ಷ ನಾಮೆರ ಅಂಕಿತ್, ಶ್ರೀ ಕಾವೇರಿ ದಸರಾ ಸಮಿತಿಯ ಖಜಾಂಜಿ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ. ಮಂಜುಳ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ, ಸಮಿತಿಯ ಪದಾಧಿಕಾರಿಗಳಾದ ಚಂದನ್ ಕಾಮತ್, ನಾಯಂದರ ಶಿವಾಜಿ, ಧನಲಕ್ಷಿö್ಮ, ಪಳನಿ, ಆದಿತ್ಯ ಪೆಮ್ಮಯ್ಯ, ಸಚಿನ್, ಸೋಮಣ್ಣ, ಮಿಲನ್ ರಮೇಶ್, ಕೌಶಿಕ್, ಭರತ್ ಹಾಗೂ ದರ್ಶನ್, ಸುಮಿ ಸುಬ್ಬಯ್ಯ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.