ಮಡಿಕೇರಿ, ಸೆ. ೨೯: ರಾಷ್ಟಿçÃಯ ಸೇವಾ ಯೋಜನೆ ದಿನಾಚರಣೆ ಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕೊಡಗು ವಿವಿ ಗಣಕ ಶಾಸ್ತç ವಿಭಾಗದ ಮುಖ್ಯಸ್ಥ ರವಿಶಂಕರ್ ಎಂ.ಎನ್. ಮಾತನಾಡಿ, ಸ್ವಯಂಸೇವಕರಲ್ಲಿ ಎನ್ಎಸ್ಎಸ್ ಧ್ಯೇಯದ ಕುರಿತು ವಿವರಿಸಿ, ಸಮಾಜಸೇವೆಯ ಮುಖಾಂತರ ವ್ಯಕ್ತಿತ್ವ ವಿಕಸನವನ್ನು ಮಾಡಬೇಕು ಹಾಗೂ ನಮ್ಮಲ್ಲಿ ಸ್ವರಾಜ್ಯ ಹಾಗೂ ಸುರಾಜ್ಯ ಈ ಎರಡು ಪರಿಕಲ್ಪನೆಗಳು ಜಾರಿಗೊಳಿಸಿ, ಶ್ರಮದಾನ ಹಾಗೂ ಸಮುದಾಯದ ಬೆಳವಣಿಗೆಯಿಂದ ಬದಲಾವಣೆ ತರಬಹುದು ಎಂದು ವಿವರಿಸಿದರು.
ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ. ಅವರು ಮಾತನಾಡಿ, ಸ್ವಯಂಸೇವಕರು ತಮ್ಮ ಆತ್ಮ ಸಂತೋಷಕ್ಕಾಗಿ ಕೆಲಸ ಮಾಡಬೇಕೇ ವಿನಹ ಯಾರ ಒತ್ತಡಕ್ಕೂ ಕೆಲಸ ಮಾಡಬಾರದು. ನಮ್ಮ ಕೆಲಸದಿಂದ ಜಗತ್ತಿನಲ್ಲಿ ಪರಿವರ್ತನೆಯನ್ನು ಬಯಸಬೇಕು. ಹಾಗೆಯೇ ನಮ್ಮ ಹೆತ್ತವರಿಗೆ ಹಾಗೂ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಛಲವಿದ್ದರೆ ಮಾತ್ರ ರಾಷ್ಟಿçÃಯ ಸೇವಾ ಯೋಜನೆಯಲ್ಲಿ ಮಾಡಿದ ಸೇವೆ ಫಲ ಪ್ರದವಾಗುವುದು ಎಂದರು. ಎನ್.ಎಸ್.ಎಸ್. ಯೋಜನಾಧಿಕಾರಿ ಅಲೋಕ್ ಬಿಜೈ ಅವರು ಸ್ವಾಗತಿಸಿ, ಯೋಜನಾಧಿಕಾರಿ ಡಾ. ಶೈಲಶ್ರೀ ಕೆ. ವಂದಿಸಿದರು. ಕ್ರಿಯಾತ್ಮಕವಾಗಿ ಪೋಸ್ಟರ್ ಉದ್ಘಾಟನೆ ಮಾಡಿ ಎನ್.ಎಸ್.ಎಸ್. ದಿನದ ಮಹತ್ವವನ್ನು ಸ್ವಯಂಸೇವಕರಿಗೆ ನಾಯಕಿ ನಿಶ್ಚಿತಾ ಅವರು ಸಾರಿದರು. ವಿದ್ಯಾರ್ಥಿ ನಾಯಕರು, ಸ್ವಯಂಸೇವಕರು ಬೋಧಕ, ಬೋಧಕೇತರ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕವನ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟಿçÃಯ ಸೇವಾ ಯೋಜನೆ ಗೀತೆಯನ್ನು ಹಾಡಲಾಯಿತು.