ಮಡಿಕೇರಿ, ಸೆ. ೨೯: ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಭಾನುವಾರದಂದು ಕೊಡವ ಹಾಕಿ ಅಕಾಡೆಮಿಯ ಚುನಾವಣೆ ನಿಗದಿಯಾಗಿತ್ತು. ಇದೇ ಮೊದಲ ಬಾರಿಗೆ ಅಕಾಡೆಮಿಗೆ ಚುನಾವಣೆ ಏರ್ಪಟ್ಟಿದ್ದು, ಇದು ತೀರಾ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿದ್ದ ಹಿನ್ನೆಲೆಯಲ್ಲಿ ಚುನಾವಣಾ ಕಾವು ಹೆಚ್ಚಾಗಿತ್ತು.
ಬೆಳಿಗ್ಗೆ ೧೦ ರಿಂದಲೇ ತ್ರಿವೇಣಿ ಶಾಲೆ ಹಾಗೂ ಕೊಡವ ಸಮಾಜದ ವ್ಯಾಪ್ತಿಯಲ್ಲಿ ವಾಹನ ಹಾಗೂ ಜನಜಂಗುಳಿಯ ಸನ್ನಿವೇಶ ಕಂಡುಬAದಿತು. ಕಣದಲ್ಲಿ ಒಟ್ಟು ೧೫ ಸ್ಥಾನಗಳಿಗೆ ೩೪ ಸ್ಪರ್ಧಿಗಳಿದ್ದರು. ಅದರಲ್ಲೂ ಎರಡು ಗುಂಪುಗಳ ನಡುವಿನ ನೇರ ಸ್ಪರ್ಧೆಯಿಂದಾಗಿ ಹೆಚ್ಚಿನ ಕೌತುಕವೂ ಸೃಷ್ಟಿಯಾಗಿತ್ತು. ಎರಡೂ ತಂಡದ ಅಭ್ಯರ್ಥಿಗಳು, ಇವರೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದವರೂ ಬಿರುಸಿನ ಓಡಾಟದಲ್ಲಿ ನಿರತರಾಗಿದ್ದರು. ಆಯಾ ಅಭ್ಯರ್ಥಿಗಳ ಪರವಾಗಿ ಒಂದಷ್ಟು ಬೆಂಬಲಿಗರೂ ಕಂಡು ಬಂದರು. ಇದಲ್ಲದೆ ಮಾಜಿ ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಕೂತಂಡ ಪೂಣಚ್ಚ, ಕುಲ್ಲೇಟಿರ ಉತ್ತಯ್ಯ, ಮೇಕೇರಿರ ನಿತಿನ್ ತಿಮ್ಮಯ್ಯ, ಅಂತರರಾಷ್ಟಿçÃಯ ಹಾಕಿ ಅಂಪೈರ್ ಅಚ್ಚಕಾಳೆರ ಪಳಂಗಪ್ಪ, ರಾಷ್ಟಿçÃಯ ಹಾಕಿ ಆಟಗಾರರಾದ ಮುಕ್ಕಾಟಿರ ಅಯ್ಯಪ್ಪ, ಸೋಮೆಯಂಡ ಅಪ್ಪಚ್ಚು ಸೇರಿದಂತೆ ಹಲವು ಪ್ರಮುಖ ಹಾಕಿ ಆಟಗಾರರೂ ಜಮಾಯಿಸಿದ್ದರು.
ಮತ ಚಲಾವಣೆಗಾಗಿ ವಿವಿಧ ಕುಟುಂಬಗಳ ನಿಯೋಜಿತ ಪ್ರತಿನಿಧಿಗಳು ಮಾತ್ರವಲ್ಲದೆ, ಇನ್ನಿತರ ಸದಸ್ಯರುಗಳು, ಹಾಕಿ ಅಭಿಮಾನಿಗಳೂ ಕುತೂಹಲಭರಿತರಾಗಿ ಸೇರಿದ್ದ ಹಿನ್ನೆಲೆಯಲ್ಲಿ ತ್ರಿವೇಣಿ ಶಾಲೆಯ ಆವರಣ ಬಿರುಸಿನ ಚಟುವಟಿಕೆಗಳ ಆಗರವಾಗಿತ್ತು. ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ಮತ ಚಲಾಯಿಸಬೇಕಾಯಿತು. ೧೫ ಸ್ಥಾನಗಳಿಗೆ ವಿವಿಧ ಸ್ಪರ್ಧಿಗಳಿದ್ದರಿಂದ ಒಟ್ಟು ೭ ಬ್ಯಾಲೆಟ್ ಪೇಪರ್‌ಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿತ್ತು.
ಮತ ಚಲಾಯಿಸುವವರು ಒಟ್ಟು ೭ ಬ್ಯಾಲೆಟ್ ಪೇಪರ್‌ಗಳಿದ್ದ ಕಾರಣದಿಂದ ಆಯ್ಕೆ ಮಾಡಿ ಮತ ಚಲಾಯಿಸಲು ಒಂದಷ್ಟು ಹೆಚ್ಚಿನ ಸಮಯವೂ ಬೇಕಾಯಿತು. ಮಹಿಳೆಯರೂ ಪ್ರಚಾರದಲ್ಲಿ ಕಂಡು ಬಂದರು. ೪೭೩ ಕುಟುಂಬಗಳ ೪೪೮ ಮಂದಿ ಮತ ಚಲಾಯಿಸಿದ್ದರಿಂದ ನಿಗದಿತ ೨ ಗಂಟೆಯ ಬದಲಾಗಿ ಮತ ಚಲಾವಣೆ ಪೂರ್ಣಗೊಳ್ಳಲು ಮತ್ತಷ್ಟು ಹೆಚ್ಚಿನ ಸಮಯಬೇಕಾಯಿತು.
ಮತಪತ್ರಗಳನ್ನು ಜೋಡಿಸಿದ ಬಳಿಕ ಮತ ಎಣಿಕೆ ಪ್ರಕ್ರಿಯೆ ಸಂಜೆ ೪.೩೦ರ ನಂತರವಷ್ಟೆ ಆರಂಭಗೊAಡಿತು. ೪೪೮ ಮಂದಿ ಮತ ಚಲಾಯಿಸಿದ್ದರಾದರೂ ಒಟ್ಟಾರೆಯಾಗಿ ಒಬ್ಬರಿಗೆ ೧೫ ಮತ ಹಾಕುವ ಅವಕಾಶವಿದ್ದ ಹಿನ್ನೆಲೆ ಮತ ಎಣಿಕೆಯೂ ನಿಧಾನಗತಿಯಲ್ಲೇ ಸಾಗುವಂತಾಗಿತ್ತು. ನಿರ್ದೇಶಕ ಸ್ಥಾನದ ಮತ ಎಣಿಕೆ ಪೂರ್ಣಗೊಳ್ಳಲೇ ಹೆಚ್ಚಿನ ಸಮಯವಾದ ಕಾರಣದಿಂದಾಗಿ ಅಂತಿಮ ಫಲಿತಾಂಶ ಹೊರಬೀಳಲು ರಾತ್ರಿ ೮ ಗಂಟೆಯ ಸಮಯವಾಗಿತ್ತು.
ನಿರ್ದೇಶಕ ಸ್ಥಾನದಲ್ಲಿ ಒಂದೇ ತಂಡದ ಅಭ್ಯರ್ಥಿಗಳು ಬರಲಾರರು ಎಂಬ ಚರ್ಚೆ ಅಲ್ಲಲ್ಲಿ ನಡೆದಿತ್ತಾದರೂ ಇದು ಹುಸಿಯಾಗಿ ಪಾಂಡAಡ ಬೋಪಣ್ಣ ತಂಡದ ಸ್ಪರ್ಧಿಗಳೇ ಮುನ್ನಡೆ ಸಾಧಿಸಿದ್ದು, ಅರಿವಿಗೆ ಬಂದAತೆ ಫಲಿತಾಂಶ ಈ ತಂಡದ ಪರವಾಗಿಯೇ ಬರುತ್ತದೆ ಎಂಬದು ಬಹುತೇಕ ಖಾತರಿಗೊಂಡಿತ್ತು. ಪರಾಭವಗೊಂಡರೂ ಕೆಲವು ನಗು ಮುಖದಿಂದಲೇ ಸ್ಥಳದಲ್ಲಿ ಇತರರೊಂದಿಗೆ ವಿಶ್ಲೇಷಣೆಯಲ್ಲಿ ತೊಡಗಿದ್ದರು.
ಮಾತುಕತೆಗಳು
ಈ ಚುನಾವಣೆಯ ಬಗ್ಗೆ ನೆರೆದಿದ್ದವರಲ್ಲಿ ಹಲವು ರೀತಿಯ ಮಾತುಕತೆಗಳು ಕೇಳೀಬರುತ್ತಿದ್ದವು. ಕೊಡವ ಹಾಕಿ ಅಕಾಡೆಮಿಗೆ ಇಂತಹ ಪರಿಸ್ಥಿತ ಎದುರಾಗಬಾರದಿತ್ತು ಎಂಬದು ಬಹುತೇಕರ ಅಭಿಪ್ರಾಯವಿದ್ದಂತಿತ್ತು. ಇನ್ನು ಕೆಲವು ‘ಇಲೆಕ್ಷನ್ ಬೇಕಿರಲಿಲ್ಲ... ಸಲೆಕ್ಷನ್’ ಆಗಬೇಕಿತ್ತು ಎಂದಿದ್ದರು. ಮತ್ತೆ ಕೆಲವರು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಏಳಿಗೆಯಾಗಲಿ ಎನ್ನುತ್ತಿದ್ದರು. ಸ್ಥಳದಲ್ಲಿ ಭಾರೀ ವಾಹನ... ಜನಜಂಗುಳಿ ಇದ್ದರೂ ಇಲ್ಲಿಗೆ ಪೊಲೀಸರು ಬೇಕೆಂಬ ಪರಸ್ಥಿತಿ ಸ್ಥಳದಲ್ಲಿ ಇರಲಿಲ್ಲ. ಸಂಜೆ ವೇಳೆಯಷ್ಟೆ ಹೊರಭಾಗದಲ್ಲಿ ಪೊಲೀಸ್ ಜೀಪೊಂದು ಕಂಡು ಬಂದಿತು.
ಬೋಪಣ್ಣ ತಂಡದ ಜಯ ಖಚಿತವಾಗುತ್ತಿದ್ದಂತೆ ಒಂದೆರಡು ಪಟಾಕಿಯ ಶಬ್ದವೂ ಕೇಳಿಬಂದಿತು. ಮತ ಎಣಿಕೆ ಪೂರ್ಣಗೊಳ್ಳುವ ನತಕವೂ ಸ್ಥಳದಲ್ಲಿ ಸಾಕಷ್ಟು ಮಂದಿ ಕೌತುಕದಿಂದ ನೆರೆದಿದ್ದರು.
- ಕಾಯಪಂಡ ಶಶಿ ಸೋಮಯ್ಯ