ಗುಡ್ಡೆಹೊಸೂರು, ಸೆ. ೨೯: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆಯಲ್ಲಿ ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಶಿಬಿರ ಏರ್ಪಡಿಸಲಾಗಿದೆ.

ಈ ಶಿಬಿರದ ಚಾಲನೆ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್.ಎನ್ ಶಂಭು ಲಿಂಗಪ್ಪ ಅವರು ವಹಿಸಿದ್ದರು. ಎಸ್‌ಎಲ್‌ಎನ್ ಕಾಫಿ ಸಂಸ್ಥೆಯ ಮಾಲೀಕ ರಾದ ಎನ್. ಸಾತಪ್ಪನ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವುದಕ್ಕೆ ಮಾತ್ರ ಸೀಮಿತವಾಗದೆ ಈ ರೀತಿಯ ಶಿಬಿರÀಗಳಲ್ಲಿ ಭಾಗವಹಿಸಿ ಪ್ರತಿಫಲ ಬಯಸದೆ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರೊಫೆಸರ್ ದಯಾನಂದ ಮಾತನಾಡಿ ಈ ರೀತಿಯ ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕ್ರೀಯಾಶೀಲರಾಗಿ, ಗೌರವಯುತವಾಗಿ ಶಿಸ್ತುಬದ್ಧ ಜೀವನ ನಡೆಸುತ್ತಾರೆ ಎಂದರು.

ವೇದಿಕೆಯಲ್ಲಿ ಪ್ರಗತಿಪರ ರೈತರು ಮತ್ತು ಉದ್ಯಮಿಗಳಾದ ಜೆರ್ಮಿ ಡಿಸೋಜಾ ಅವರು ಹಾಜರಿದ್ದು ಮಾತನಾಡಿ, ವಿದ್ಯಾರ್ಥಿ ಗಳು ಮನೆಯಿಂದ ಹೊರಬಂದು ಈ ರೀತಿಯ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಶಿಸ್ತು ಬೆಳೆಸಿಕೊಳ್ಳ ಬೇಕೆಂದರು. ಈ ಸಂದರ್ಭ ವಿವೇಕಾನಂದ ಕಾಲೇಜಿನ ನಂಜಪ್ಪ, ವಸತಿ ಶಾಲೆಯ ಮುಖ್ಯ ಶಿಕ್ಷಕ ರವಿ, ಪತ್ರಕರ್ತರಾದ ಚಂದ್ರಮೋಹನ್, ಕಾಲೇಜಿನ ಪ್ರಾಂಶುಪಾಲರಾದ ಲಿಖಿತ್, ವ್ಯವಸ್ಥಾಪಕ ಮಹೇಶ್, ಶಿಬಿರಾಧಿಕಾರಿ ಮಂಜೇಶ್, ಉಪನ್ಯಾಸಕರಾದ ದೇವೇಂದ್ರ ಹಾಜರಿದ್ದರು.