ಮಡಿಕೇರಿ, ಸೆ. ೨೯: ಇತ್ತೀಚೆಗೆ ಜಾರ್ಖಂಡ್‌ನಲ್ಲಿ ನಡೆದ ಸಿ.ಐ.ಎಸ್.ಇ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿ ಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವ ಹಿಸಿ ಸಾಧನೆ ಗೈದಿದ್ದಾರೆ. ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆದಿದ್ದು, ಕರ್ನಾಟಕ-ಗೋವಾವನ್ನು ಪ್ರತಿನಿಧಿಸಿದ್ದ ಕ್ಯಾಲ್ಸ್ನ ವಿದ್ಯಾರ್ಥಿಗಳ ತಂಡ ೧೯ರ ವಯೋ ಮಾನದೊಳಗಿನ ವಿಭಾಗದಲ್ಲಿ ದ್ವಿತೀಯ, ೧೭ ವಯೋಮಾನದೊಳಗಿನ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿತು. ಐಸಾಕ್ ಜೋಜಿ, ಡಿಯೋನ್ ಬೆಳ್ಯಪ್ಪ, ಲಥನ್ ಸಚೇತ್ ಹಾಗೂ ಓಂಕಾರ್ ವಿಜಯ್ ಅವರುಗಳು ಸ್ಕೂಲ್ ಗೇಮ್ಸ್ ಫೆಡರೇಷನ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡರು.