ಮಡಿಕೇರಿ, ಸೆ. ೨೯ : ಈ ಬಾರಿಯ ದಸರಾ ದಶಮಂಟಪ ಪ್ರದರ್ಶನ ವೇಳೆ ನಿಯಮಬದ್ಧ ಹಾಗೂ ಪಾರದರ್ಶಕ ತೀರ್ಪುಗಾರಿಕೆಗೆ ಒತ್ತು ನೀಡಲಾಗುವುದು; ಹಾಗಿದ್ದೂ ಸರಕಾರದ ವಿವಿಧ ಇಲಾಖೆಗಳಿಂದ - ಅನಗತ್ಯ ಒತ್ತಡ ಬಂದಲ್ಲಿ ಅವನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ದಶಮಂಟಪ ಸಮಿತಿ ಪದಾಧಿಕಾರಿಗಳು ಹೇಳಿದರು.
ಇಂದು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಮಿತಿಯಿಂದ ಮಾಹಿತಿ ನೀಡಲಾಯಿತು. ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಕೋಟೆ ಮಹಾಗಣಪತಿ ದೇವಾಲಯ ಆವರಣದಲ್ಲಿ ೪ ತೀರ್ಪುಗಾರರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದಶಮಂಟಪ ಸಮಿತಿ ಗೌರವಾಧ್ಯಕ್ಷ ಬಿ.ಎಂ ರಾಜೇಶ್ ಅವರು ಹೇಳಿದರು. ತೀರ್ಪುಗಾರಿಕೆ ವಿಚಾರದಲ್ಲಿ ಕೆಲವೊಂದು ಬದಲಾವಣೆಗಳು ತರಲಾಗಿದ್ದು, ಸರ್ವ ಮಂಟಪಗಳ ಸಮಿತಿಯ ಒಪ್ಪಿಗೆ ಮೇರೆಗೆ ಕಲಾಕೃತಿ ಚಾಲನೆ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್, ಕಥಾ ಸಾರಾಂಶ ಮತ್ತು ಧ್ವನಿ ಮುದ್ರಣ, ನಿಗದಿತ ಸ್ಥಳದಲ್ಲಿ ಪ್ರದರ್ಶನ, ಶುಚಿತ್ವ ಮತ್ತು ಸಮಯ ಪಾಲನೆ ಹಾಗೂ ಪ್ರಭಾವಳಿ ಮತ್ತು ಸ್ಟುಡಿಯೋಗೆ ತಲಾ ಗರಿಷ್ಠ ೨೫ ಅಂಕ ಇರಲಿದೆ. ಒಂದು ಮಂಟಪಕ್ಕೆ ಗರಿಷ್ಠ ೨೨ ನಿಮಿಷ ಪ್ರದರ್ಶನ ಅವಧಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪೊಲೀಸ್ ಇಲಾಖೆ, ಆರ್.ಟಿ.ಒ ಇತ್ಯಾದಿ ಇಲಾಖೆಗಳಿಂದ ಹೊರಡಿಸಲಾದ ನಿಯಮಗಳ ಆಧಾರದಲ್ಲಿಯೇ ಶೋಭಾಯಾತ್ರೆ ನಡೆಯಲಿದೆ ಎಂದ ರಾಜೇಶ್ ಅವರು, ಇಲಾಖೆಗಳಿಂದ ಹೆಚ್ಚು ಒತ್ತಡ ಬಂದರೆ ಪರಿಣಾಮಗಳನ್ನು ಎದುರಿಸಲೂ ಸಿದ್ದವಿದ್ದೇವೆ. ಪ್ರತಿ ಮಂಟಪ ತಯಾರಿಯಲ್ಲಿ ಅಂದಾಜು ೫೦೦ ಮಂದಿಯ ಶ್ರಮ ಇದೆ . ೧೦ ಮಂಟಪಗಳ ಮೂಲಕ ೫,೦೦೦ ಐದನೇ ಪುಟಕ್ಕೆ ಮೊದಲನೇ ಪುಟದಿಂದ ಮಂದಿ ಬಲ ಇದೆ. ಎಲ್ಲರೂ ಸೌಹಾರ್ದತೆಯಿಂದ ಇದ್ದೇವೆ. ಎಲ್ಲರೂ ವ್ಯವಸ್ಥಿತವಾಗಿಯೇ ಹಾಗೂ ಕೆಲವರು ಸಸ್ಯಾಹಾರ ವ್ರತವನ್ನೂ ಮಾಡಿ ಮಂಟಪ ತಯಾರಿಯಲ್ಲಿ ಭಕ್ತಿಯಿಂದ ತೊಡಗಿದ್ದೇವೆ. ಇದರಿಂದಾಗಿ ನಿಯಮಗಳ ಹೇರಿಕೆಗೆ ಇಲಾಖೆಗಳು ಹೆಚ್ಚು ಒತ್ತಡ ಹಾಕಬಾರದು. ನಾವು ಆದಷ್ಟು ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಶೋಭಾಯಾತ್ರೆಯ ವ್ಯವಸ್ಥೆ ಮಾಡುತ್ತೇವೆ ಎಂದರು.
ಕಳೆದೆರಡು ವರ್ಷಗಳ ಹಿಂದೆ ಕುಂದುರುಮೊಟ್ಟಯ ಮಂಟಪ ಉರುಳಿದ್ದು ಅಲ್ಲಿನ ರಸ್ತೆ ಅವ್ಯವಸ್ಥೆ ಹಾಗೂ ಅಲ್ಲಿ ಹಾಕಲಾಗಿದ್ದ ಅನಧಿಕೃತ ಅಂಗಡಿಗಳಿAದ ಹೊರತು ಸಮಿತಿಯ ಬೇಜವಾಬ್ದಾರಿತನದಿಂದ ಅಲ್ಲ ಎಂದು ಈ ಸಂದರ್ಭ ಅವರು ಸ್ಪಷ್ಟಪಡಿಸಿದರು.
ಡಿ.ಜೆ ಅನ್ನು ಯಾವ ಮಂಟಪಗಳೂ ಬಳಸುವುದಿಲ್ಲ. ಧ್ವನಿವರ್ಧಕಗಳನ್ನು ಖಂಡಿತ ಬಳಸುತ್ತೇವೆ ಎಂದು ಮಾಹಿತಿ ನೀಡಿದರು. ಪ್ರತಿ ಮಂಟಪದವರು ೨ ಟ್ರಾö್ಯಕ್ಟರ್ಗಳನ್ನು ಬಳಸುತ್ತವೆ, ೩ ಪ್ರದರ್ಶನಗಳನ್ನು ಪ್ರತಿ ಮಂಟಪಗಳು ನೀಡಲಿವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ದುರಂತ ಹಿನ್ನೆಲೆ ಹೆಚ್ಚಿನ ಎಚ್ಚರ ವಹಿಸಿ ಪ್ರದರ್ಶನ ಸಮಯದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳ ಮೂಲಕ ಮಂಟಪಗಳ ಪ್ರದರ್ಶನ ನಡೆಯಲಿದೆ ಎಂದರು.
ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್ ಅವರು ಮಾತನಾಡಿ ಈ ಬಾರಿಯ ತೀರ್ಪು ಕೂಡಾ ಪಾರದರ್ಶಕವಾಗಿ ಇರಲಿದ್ದು, ಮಂಟಪಗಳ ಕಥಾ ಪ್ರದರ್ಶನ ವೇಳೆ ನಿಯಮಬದ್ಧತೆ ಕಾಯ್ದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ದಶಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ರಜತ್ ಶೇಟ್, ಸದಸ್ಯರಾದ ಪುನೀತ್ ಇದ್ದರು.