ಗೋಣಿಕೊಪ್ಪಲು, ಸೆ. ೨೯: ಶಿವಾಜಿ ಯುವಸೇನೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಒಕ್ಕೂಟ, ತಾಲೂಕು ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ದಸರಾ ಅಂಗವಾಗಿ ಗೋಣಿಕೊಪ್ಪದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ದಸರಾ ಕಬಡ್ಡಿ ಟೂರ್ನಿಯಲ್ಲಿ ಇಂಚರ ಕೊಡಗು ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಎಂಟಿಎಫ್‌ಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ರೋಚಕ ಫೈನಲ್ ಪಂದ್ಯದಲ್ಲಿ ಎಂಟಿಎಫ್‌ಸಿ ತಂಡವನ್ನು ೨೪-೧೮ ಅಂಕಗಳ ಅಂತರದಿAದ ಸೋಲಿಸಿ ಇಂಚರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ೫೦ ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ಎಂಟಿಎಫ್‌ಸಿ ತಂಡಕ್ಕೆ ೩೦ ಸಾವಿರ ಏಳನೇ ¥ ಮೊದಲನೇ ಪುಟದಿಂದ ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು.೩ನೇ ಹಾಗೂ ೪ನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಮಯೂರ ವಾರಿಯರ್ಸ್ ಹಾಗೂ ೭ ಸ್ಟಾರ್ ಸಿದ್ದಾಪುರ ತಂಡದ ನಡುವೆ ಸೆಣಸಾಣ ನಡೆಸಿತು. ಮಯೂರ ವಾರಿಯರ್ಸ್ ತಂಡ ೩ನೇ ಸ್ಥಾನ ಹಾಗೂ ೭ ಸ್ಟಾರ್ ಸಿದ್ದಾಪುರ ತಂಡ ೪ನೇ ಸ್ಥಾನ ಪಡೆಯಿತು. ಗೋಣಿಕೊಪ್ಪ ಬುಲ್ಸ್ ತಂಡವು ಉತ್ತಮ ಟೀಮ್ ಪ್ರಶಸ್ತಿಗೆ ಭಾಜನವಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಕ್ರೀಡಾಪಟುಗಳ ಬೆಳವಣಿಗೆಗೆ ಪಂದ್ಯಾವಳಿ ಆಯೋಜನೆ ಅಗತ್ಯವಾಗಿದೆ. ಶಿವಾಜಿ ಸೇನೆ ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ ಬಗ್ಗೆ ಶ್ಲಾಘನಿಸಿದರು. ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಆಫೀಸರ್ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ, ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಕ್ರೀಡೆಯಿಂದ ದೈಹಿಕವಾಗಿ ಸದೃಢವಾಗಬಹುದು. ಹೊನಲು ಬೆಳಕಿನ ಕ್ರೀಡೆ ನಡೆಸುವುದು ಸುಲಭದ ಮಾತಲ್ಲ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಿದ್ದಲ್ಲಿ ಸಾಕಷ್ಟು ಪ್ರತಿಭೆಗಳು ಗ್ರಾಮೀಣ ಮಟ್ಟದಿಂದ ಹೊರಹೊಮ್ಮಲು ಅವಕಾಶವಿದೆ ಎಂದರು.

ಸಮಿತಿಯ ಅಧ್ಯಕ್ಷ ಎಲ್.ಎನ್.ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೪ ವರ್ಷಗಳ ಹಿಂದೆ ಕೆಲವು ಯುವಕರ ಅಭಿಲಾಷೆಯಂತೆ ಶಿವಾಜಿ ಯುವ ಸೇನೆಯನ್ನು ಅಸ್ತಿತ್ವಕ್ಕೆ ತರಲಾಯಿತು. ನಂತರ ಸಾಮಾಜಿಕ ಕಾರ್ಯದಲ್ಲಿ ಯುವಕರು ತಮ್ಮನ್ನು ತೊಡಗಿಸಿ ಕೊಂಡರು. ಗ್ರಾಮೀಣ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಕಬಡ್ಡಿ ಪಂದ್ಯಾಟವನ್ನು ಆಯೋಜಿ ಸಲಾಯಿತು. ವಾರ್ಷಿಕವಾಗಿ ರಕ್ತದಾನ ಶಿಬಿರಗಳು ನಡೆಸುತ್ತಿ ದ್ದೇವೆ. ಪಂದ್ಯಾವಳಿಗೆ ನಿರೀಕ್ಷೆಗೂ ಮೀರಿದ ತಂಡಗಳು ಭಾಗವಹಿಸು ತ್ತಿವೆ. ನಾಡಿನ ದಾನಿಗಳ ಸಹಕಾರ ಕ್ರೀಡೆಯ ಯಶಸ್ಸಿಗೆ ಮೂಲ ಕಾರಣ ಎಂದರು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾಪ್ಸ್ ವಿದ್ಯಾಸಂಸ್ಥೆಯ ಪಿಆರ್‌ಈ ಅಣ್ಣಳಮಾಡ ಮಾನಸ ತಿಮ್ಮಯ್ಯ, ಗೋಣಿಕೊಪ್ಪಲುವಿನ ಎಲ್‌ಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಅಮೃತ್ ನಾಣಯ್ಯ, ಸಮಿತಿಯ ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ, ಉದ್ಯಮಿಗಳಾದ ಎಂ.ಎA.ನಾಗೇಶ್, ಎಂ.ಜಿ.ನಾಗರಾಜ್, ಎಂ.ಎನ್.ಯೋಗೇಶ್, ಎಂ.ಜಿ.ಕಾAತರಾಜ್, ಸಿದ್ದರಾಜು, ಗಣೇಶ್‌ರೈ, ಅರುವತ್ತೋಕ್ಕಲು ಗ್ರಾ.ಪಂ.ಸದಸ್ಯ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ದಾನಿಗಳಾದ ತೀತಿರ ರೋಶನ್ ಅಪ್ಪಚ್ಚು ಹಾಗೂ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಅವರನ್ನು ಗೌರವಿಸಲಾಯಿತು.

ಪ್ರೇಕ್ಷ ಹಾಗೂ ಸೋನಲ್ ಪ್ರಾರ್ಥಿಸಿ, ಕಳತ್ಮಾಡು ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯವತಿ ಅಣ್ಣಪ್ಪ ನಿರೂಪಿಸಿ, ಪತ್ರಕರ್ತ ಚನ್ನನಾಯಕ್ ಸ್ವಾಗತಿಸಿ, ಶಿವಾಜಿ ಯುವ ಸೇನೆಯ ಸಂಘಟನಾ ಕಾರ್ಯದರ್ಶಿ ವಿನೋದ್ ವಂದಿಸಿದರು.

- ಹೆಚ್.ಕೆ.ಜಗದೀಶ್