ಚೆಟ್ಟಳ್ಳಿ/ಗೋವಾ, ಸೆ. ೨೯: ಗೋವಾ ಕೊಡಗು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಗೋವಾದಲ್ಲಿ ಕೈಲ್‌ಪೊಳ್ದ್ ಕಾರ್ಯಕ್ರಮ ನಡೆಯಿತು.

ಗೋವಾದಲ್ಲಿ ನೆಲೆಸಿದ ಎಲ್ಲಾ ಕೊಡಗಿನ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಹಿರಿಯರಾದ ಚಿಂಡಮಾಡ ಸರೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಕಾವೇರಿ ಮಾತೆಗೆ ನಮಿಸಲಾಯಿತು. ಚೇನಂಡ ಚಿತ್ರ ಕರುಂಬಯ್ಯ ಪ್ರಾರ್ಥಿಸಿ, ಬೈರೇಟಿರ ಚಾಂದಿನಿ ಬೋಪಣ್ಣ ಸ್ವಾಗತಿಸಿ, ವಂದಿಸಿದರು. ಮಾದೇಟೀರ ಸುರೇಶ, ಮುಕ್ಕಾಟಿರ ಲವಾ, ತಾಣಚ್ಚಿರ ರಾಜೇಶ್, ಆನೆಯಡ ಬೊಳ್ಳವ್ವ ವೇದಿಕೆಯಲ್ಲಿದ್ದರು.