ಮಡಿಕೇರಿ, ಸೆ. ೩೦: ನಗರದ ಶ್ರೀ ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ೫೧ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಆನಂದ್ ಸುಬ್ರಮಣಿ ತಿಳಿಸಿದ್ದಾರೆ.
ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾಲಬೈರವ ಮಹಾತ್ಮ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಪ್ಲಾಟ್ ಫಾರಂ ನಿರ್ಮಾಣ ಹಾಗೂ ಟ್ರಾö್ಯಕ್ಟರ್ ಸೆಟ್ಟಿಂಗನ್ನು ಸಮಿತಿ ಸದಸ್ಯರೆ ಮಾಡಲಿದ್ದಾರೆ. ದಿಂಡಿಗಲ್‌ನ ಪೆಲೆಕ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಟಿಡಿಎಸ್‌ಎಲ್ ತಂಡ ಸ್ಟುಡಿಯೋ ಹಾಗೂ ಫೈರ್‌ವರ್ಕ್ ವ್ಯವಸ್ಥೆ ಮಾಡಲಿದೆ. ಸ್ಕೆöÊಡ್ರಾಪ್ ಇವೆಂಟ್‌ನ ಮಧು ಧ್ವನಿವರ್ಧಕ ಒದಗಿಸಲಿದ್ದು, ಒಟ್ಟು ೧೬ ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಮಡಿಕೇರಿಯ ಮಂಜುನಾಥ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ ಕಲಾಕೃತಿಗಳಿಗೆ ಚಲನವಲನವನ್ನು ಹೇಮರಾಜ್ ಹಾಗೂ ಸಮಿತಿ ಸದಸ್ಯರು ನೀಡಲಿದ್ದಾರೆ. ರೂ. ೨೨ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಆನಂದ್ ಸುಬ್ರಮಣಿ ಮಾಹಿತಿಯಿತ್ತರು.