ಮಡಿಕೇರಿ, ಸೆ. ೩೦: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಎಂ.ಎಸ್.ಎA.ಇ. ನಿರ್ದೇಶನಾಲಯ, ಕೆ.ಸಿ.ಟಿ.ಯು. ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ನಂತರ ನಷ್ಟಕ್ಕೆ ಒಳಗಾದ ಉದ್ಯಮಗಳ ಮರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರ್‌ಎಎಂಪಿ ಯೋಜನೆಯಡಿಯಲ್ಲಿ ಟ್ರೇಡ್ಸ್ ಹಾಗೂ ಇಎಸ್‌ಎಂ ಯೋಜನೆ ಕುರಿತು ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ಒಂದು ದಿನದ ಅರಿವು ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಂಗಳೂರು ಟೆಕ್ಸಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದರಾಜು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ, ಗ್ರಾಮೀಣ ಕೈಗಾರಿಕೆಗಳು ಉಪ ನಿರ್ದೇಶಕ ರಘು ಸಿ.ಎನ್., ಉಪನಿರ್ದೇಶಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಲೀಡ್ ಡಿಸ್ಟಿçಕ್ ಮ್ಯಾನೇಜರ್ ಆರ್.ಕೆ. ಬಾಲಚಂದ್ರ, ಮಡಿಕೇರಿ ಕೆ.ಎಸ್.ಎಫ್.ಸಿ. ಉಪ ವ್ಯವಸ್ಥಾಪಕರು (ಕಾನೂನು) ತೃಪ್ತಿ ಎಸ್., ಡಿ.ಎಸ್.ಎಂ.ಎಸ್. ಅಧ್ಯಕ್ಷ ಸಿ.ವಿ. ನಾಗೇಶ್, ಕೂಡಿಗೆ ರೆಸ್ಟಿ(ಆರ್‌ಎಸ್‌ಇಟಿಐ)ನ ಪ್ರಕಾಶ್ ಕುಮಾರ್, ಸಿಡಾಕ್‌ನ ಜಂಟಿ ನಿರ್ದೇಶಕ ಮಧು, ಕುಶಾಲನಗರ ಬ್ಯಾಂಕ್ ಆಫ್ ಬರೋಡದ ಮುಖ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ವಿ. ಉಮೇಶ ಸ್ವಾಗತಿಸಿದರು. ಸಿಡಾಕ್ ನಿವೃತ್ತ ಜಂಟಿ ನಿರ್ದೇಶಕ ಮಂಜುನಾಥ ಸ್ವಾಮಿ ನಿರೂಪಿಸಿದರು