ಕುಶಾಲನಗರ, ಸೆ. ೩೦: “ನ್ಯಾಯದ ಹರಿಕಾರ: ಪ್ರವಾದಿ ಮುಹಮ್ಮದ್(ಸ)” ಎಂಬ ಶೀರ್ಷಿಕೆಯಡಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಡೆದು ಬರುತ್ತಿದ್ದ ಸೀರತ್ ಅಭಿಯಾನದ ಸಮಾರೋಪ ಸಮಾರಂಭ ಕುಶಾಲನಗರದಲ್ಲಿ ನಡೆಯಿತು. ಹಿರಿಯ ನ್ಯಾಯವಾದಿ ನಾಗೇಂದ್ರಬಾಬು ಸಮಾವೇಶವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಪ್ರವಾದಿಗಳು ಎಂದೂ ತಾನು ದೇವರೆಂದು ಅಥವಾ ದೇವಾಂಶ ಸಂಭೂತರೆAದೂ ವಾದಿಸಲಿಲ್ಲ. ಆದುದರಿಂದಲೇ ಅವರು ಎಂದೂ ಎಲ್ಲಿಯೂ ಪೂಜಿಸಲ್ಪಡುತ್ತಿಲ್ಲ. ಪ್ರವಾದಿಗಳು ತಮ್ಮ ಉನ್ನತ ಚಾರಿತ್ರö್ಯ ಮತ್ತು ಪ್ರಾಮಾಣಿಕತೆಯ ಮೂಲಕ ಸಮಾಜವನ್ನು ಬದಲಾಯಿಸಿದರು” ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಎಂ.ಹೆಚ್.ಮುಹಮ್ಮದ್ ಕುಂಞÂ ಮಾತನಾಡಿ, ಸತ್ಯಕ್ಕೆ ಮನ್ನಣಿಯಿಲ್ಲದ, ಸತ್ಯವನ್ನು ಒಪ್ಪಿಕೊಳ್ಳದ, ಸತ್ಯಕ್ಕೆ ಪ್ರಭಾವವಿಲ್ಲದ ಸಮಾಜದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಜನತೆಗೆ ಸತ್ಯವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಜಾಗೃತ ಸಮಾಜದಿಂದ ಆಗಬೇಕು. ನ್ಯಾಯ ಎಂಬುದು ಮನುಷ್ಯನ ಮೂಲಭೂತ ಅಗತ್ಯತೆಯಾಗಿದೆ.

ಪ್ರವಾದಿ ಮುಹಮ್ಮದ(ಸ)ರು ನ್ಯಾಯದ ಕಲ್ಪನೆಯನ್ನು ದೇವಭಯದ ಆಧಾರದಲ್ಲಿ ಜಾರಿಮಾಡಿದರು. ಮನುಷ್ಯನ ಜೀವ ಮತ್ತು ಘನತೆ ಸಂರಕ್ಷಿಸಲ್ಪಡಬೇಕು. ಪ್ರತಿಯೊಬ್ಬರ ವಿಶ್ವಾಸ ಮತ್ತು ನಂಬಿಕೆಗಳು ಗೌರವಿಸಲ್ಪಡಬೇಕು ಎಂಬುದು ಪ್ರವಾದಿಯವರ ಬೋಧನೆಯಾಗಿತ್ತು ಎಂದರು.

ಸಿ.ಎಸ್.ಐ ಕೊಡಗು ವಲಯದ ಉಪಾಧ್ಯಕ್ಷ ರೆ||ಫಾ||.ಸ್ಯಾಮುವಲ್ ಮನೋಜ್ ಕುಮಾರ್, ಬೈಲ್‌ಕೊಪ್ಪ ನಾಮ್ ಡ್ರೋಲಿಂಗ್ ಮೊನೇಸ್ಟಿç ಇದರ ಮುಖ್ಯಸ್ಥರಾದ ತುಲ್‌ಕು ಚೋದರ್ ರಿನ್‌ಪೋಚೆ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೈರಳಿ ಸಮಾಜಮ್ ಅಧ್ಯಕ್ಷ ಪಿ.ರವೀಂದ್ರನ್, ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕೊಡವ ಸಮಾಜದ ಅಧ್ಯಕ್ಷ ವಾಂಚಿರ ಮನು ನಂಜುಡ, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಅಧ್ಯಕ್ಷ ನಾಗೇಶ್, ಸೀರತ್ ಸಮಾವೇಶ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ನಝೀರ್ ಅಹಮದ್, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್, ಜಾಮಿಯಾ ಮಸೀದಿ ಅಧ್ಯಕ್ಷ ಮೆಹತಾಬ್ ಅಹಮದ್ ವೇದಿಕೆಯಲ್ಲಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್ ಧನ್ಯವಾದವಿತ್ತರು.

ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ನೆರವೇರಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರವಾದಿಯವರ ಜೀವನ ಮತ್ತು ಆದರ್ಶ ಕಲಿಕೆಗೆ ಕನ್ನಡ ಕೃತಿಗಳು ಸಹಕಾರಿಯಾಗಿವೆ. ಸಾಹಿತ್ಯ , ಧಾರ್ಮಿಕ ಕಾರ್ಯಗಳಿಗೆ ಯುವಜನತೆಯ ಒಲವು ಮೂಡಿಸುವ ಕೆಲಸ ಆಗಬೇಕಿದೆ ಎಂದರು. ಶಾಂತಿ ಪ್ರಕಾಶನ ಸೀರತ್ ಪ್ರಯುಕ್ತ ಪ್ರಕಟಿಸಿದ ಎರಡು ಕೃತಿಗಳನ್ನು ಹಿರಿಯ ಸಾಹಿತಿ ಭಾರದ್ವಾಜ್ ಆನಂದ ತೀರ್ಥ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಅರ್ಜುನ್ ಮೌರ್ಯ ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಅಫ್ಫಾನ್ ಮೈಸೂರು ಹಾಗೂ ಟಿ.ಎ. ಬಷೀರ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮುಫ್ತಿ ರಶೀದ್ ಅಹಮದ್ ಸಾಬ್ ಖಿರಾಅತ್ ಪಠಿಸಿದರು.