ಮಡಿಕೇರಿ, ಸೆ. ೩೦: ಕಳೆದ ೧೨ ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಆಶ್ರಯವಾಗಿದ್ದ ಜಿಲ್ಲಾ ಯುವ ಭವನ ಇದೀಗ ಜಿಲ್ಲಾ ಯುವ ಒಕ್ಕೂಟಕ್ಕೆ ಮರಳಿ ದಕ್ಕಿದೆ.

ಹಿಂದಿನ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭ ಮಂಜೂರಾಗಿದ್ದ ಜಿಲ್ಲೆಯ ಪ್ರಪ್ರಥಮ ಪ್ರಥಮ ದರ್ಜೆ ಸರಕಾರಿ ಮಹಿಳಾ ಕಾಲೇಜಿಗೆ ಸೂಕ್ತ ಕಟ್ಟಡವಿಲ್ಲದ ಕಾರಣ, ಸುದರ್ಶನ ವೃತ್ತದಲ್ಲಿ ನಿರ್ಮಾಣಗೊಂಡಿದ್ದ ಜಿಲ್ಲಾ ಯುವ ಒಕ್ಕೂಟದ ಯುವ ಭವನದಲ್ಲಿ ಮಹಿಳಾ ಕಾಲೇಜು ಪ್ರಾರಂಭಗೊAಡಿತ್ತು. ಬಳಿಕ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಅಂದಿನ ಸರಕಾರದಿಂದ ಮಂಜೂರಾಗಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡ ೧೨ ವರ್ಷಗಳ ಬಳಿಕ ಇದೀಗ ನೂತನ ಶಾಸಕ ಮಂತರ್ ಗೌಡ ಅವರ ಪ್ರಯತ್ನದ ಮೂಲಕ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಶಾಸಕರು ಜಿಲ್ಲಾ ಯುವ ಒಕ್ಕೂಟಕ್ಕೆ ಭರವಸೆ ನೀಡಿದಂತೆ ನಿಗದಿತ ಸಮಯದೊಳಗೆ ಯುವ ಭವನವನ್ನು ಹಸ್ತಾಂತರಿಸಿದರು.

ಇದೀಗ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲೆ ನಿರ್ಮಲ ಅವರು ಯುವ ಭವನದ ಕೀಗೊಂಚಲನ್ನು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಅವರಿಗೆ ಹಸ್ತಾಂತರಿಸಿದರು.

ಭವನ ದುರಸ್ತಿಗೆ ಶಾಸಕರ ಭರವಸೆ

ಸದ್ಯದಲ್ಲಿಯೇ ಯುವ ಭವನದ ದುರಸ್ತಿ ಕಾರ್ಯವನ್ನು ಶಾಸಕರ ನಿಧಿಯಿಂದಲೇ ಮಾಡಿಸಿಕೊಡಲಾಗುವುದೆಂದು ಶಾಸಕ ಡಾ. ಮಂತರ್ ಗೌಡ ಅವರು ಇದೇ ಸಂದರ್ಭ ಒಕ್ಕೂಟದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಸಂದರ್ಭ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ, ಖಜಾಂಚಿ ಕುಂಜಿಲನ ಮಧು ಮೋಹನ್, ಸದಸ್ಯ ಡಿ. ನವೀನ್ ದೇರಳ, ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಕಂಬರAಡ ರಾಖಿ ಪೂವಣ್ಣ, ಸಹಾಯಕ ಪ್ರಾಧ್ಯಾಪಕರಾದ ಕೆಂಬಡತAಡ ಮುದ್ದಪ್ಪ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು.