ಸಿದ್ದಾಪುರ, ಅ. ೪: ಪಾಲಿಬೆಟ್ಟ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ೧೫ ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿAದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಬೆಟ್ಟ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ವಹಿಸಿದ್ದರು.
ಈ ವೇಳೆ ಮಾತನಾಡಿದ ವಿಜು ಸುಬ್ರಮಣಿ ಸಂಘವು ಸೌಹಾರ್ದತೆಯಿಂದ ಆಯುಧಪೂಜೆಯನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ, ಕಾಫಿ ಬೆಳಗಾರರಾದ ಕುಟ್ಟಂಡ ಅಜಿತ್ ಕರುಂಬಯ್ಯ, ವಾಟೇರಿರ ವಿನು ಸೋಮಯ್ಯ, ಬಿ.ಎನ್.ಎಸ್. ಟ್ರೇಡರ್ಸ್ ಮಾಲೀಕ, ಚುಮ್ಮಿ ಸುಧಾಕರ ರೈ, ಕೂರ್ಗ್ ಕಾಫಿ ಮಾಲೀಕ ವಿಜೇಶ್, ಪಾಲಿಬೆಟ್ಟ ವರ್ತಕರ ಸಂಘದ ಅಧ್ಯಕ್ಷ ಮುನೀರ್, ತಮಿಳು ಸಂಘದ ಅಧ್ಯಕ್ಷ ಮೈಕಲ್, ಇಂಡಿಯನ್ ಸ್ಟೋರ್ ಮಾಲೀಕ ಅಬೂಬಕರ್, ಸಹಾಯಕ ಠಾಣಾಧಿಕಾರಿ ಮಂಜುನಾಥ್ ಹಾಗೂ ಪಾಲಿಬೆಟ್ಟ ಆಟೋ ಮಾಲೀಕರ ಚಾಲಕರ ಸಂಘದ ಅಧ್ಯಕ್ಷ ದೂಜ ವೇಗಸ್, ಉಪಾಧ್ಯಕ್ಷ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಸದಸ್ಯರುಗಳು ಹಾಜರಿದ್ದರು.
ಕೇರಳದ ರಾಗತರಂಗA ಆರ್ಕೆಸ್ಟಾç ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.