ಚೆಯ್ಯಂಡಾಣೆ, ಅ. ೪: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ “ಅನುಪಮ ನಾಯಕ ಅನರ್ಘ್ಯ ಸಂದೇಶ” ಎಂಬ ಧ್ಯೇಯವಾಕ್ಯದಲ್ಲಿ ಬೃಹತ್ ಪ್ರವಾದಿ ಸಂದೇಶ ಜಾಥಾ ನಡೆಯಿತು.
ವೀರಾಜಪೇಟೆ ಪಂಜರ್ ಪೇಟೆಯಿಂದ ಆರಂಭಗೊAಡ ಜಾಥಾಕ್ಕೆ ಸ್ವಾಗತ ಸಮಿತಿಯ ಚೇರ್ಮೆನ್ ಸಯ್ಯಿದ್ ಅಹ್ಮದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಅವರು ದುಆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ವೀರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಗಡಿಯಾರ ಚೌಕಿ, ಖಾಸಗಿ ಬಸ್ ನಿಲ್ದಾಣ ಹಾಗೂ ಮೀನುಪೇಟೆ ಮೂಲಕ ಸಂಚರಿಸಿದ ಜಾಥಾವು ಅನ್ವಾರ್ ಕ್ಯಾಂಪಸ್ನಲ್ಲಿ ಸಮಾಪ್ತಿಗೊಂಡಿತು.
ವಿದ್ಯಾರ್ಥಿಗಳ, ಯುವಕರ, ಹಿರಿಯರ ದಫ್ ಪ್ರದರ್ಶನ, ಫ್ಲವರ್ ಶೋ, ಸ್ಕೌಟ್ಸ್, ಜಾಥಾಕ್ಕೆ ಮೆರುಗು ನೀಡಿತು. ಜಾಥಾವು ವೀರಾಜಪೇಟೆಯ ಹೃದಯ ಭಾಗಕ್ಕೆ ತಲುಪಿದ ಸಂದರ್ಭ ಶಾಫಿ ಜುಮಾ ಮಸೀದಿ ಹಾಗೂ ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಾಥಾವನ್ನು ಸ್ವಾಗತಿಸಿ ಸರ್ವರಿಗೂ ಸಿಹಿ ತಿಂಡಿ ವಿತರಿಸಲಾಯಿತು.
ಜಾಥಾವನ್ನುದ್ದೇಶಿಸಿ ಮಾತನಾಡಿದ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರುಲ್ ಹುದಾ ಸ್ಥಾಪಕ ಅಶ್ರಫ್ ಅಹ್ಸನಿ ಅವರು ವಿಶ್ವಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮುಹಮ್ಮದ್ ಶರೀಫ್ ಅನ್ವಾರಿ ಅಹ್ಸನಿ ಮಾತನಾಡಿ ಇಂದಿನ ಜಾಥಾ ಯಶಸ್ವಿ ಹಾಗೂ ಮಾದರಿ ಜಾಥಾವಾಗಿದೆ ಎಂದರು.
ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಮಾತನಾಡಿ, ಸುಂದರ ಸಂದೇಶಗಳನ್ನು ಜಗತ್ತಿಗೆ ಸಾರುವುದರ ಮೂಲಕ ಜನ ಹೃದಯಗಳಲ್ಲಿ ಪ್ರವಾದಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರು.
ಹುಬ್ಬುರಸೂಲ್ ಕಾರ್ಯಕ್ರಮದಲ್ಲಿ ಸಯ್ಯಿದ್ ಸಅದ್ ತಂಙಳ್ ಇರಿಕ್ಕೂರ್ ನೇತೃತ್ವ ವಹಿಸಿ ದುಆ ಆಶೀರ್ವಚನ ನೀಡಿದರು.
ಪ್ರಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟಪಡವು ಹುಬ್ಬುರಸೂಲ್ ಮಾತನಾಡಿ, ಮುಹಮ್ಮದ್ ಪೈಗಂಬರ್ (ಸ.ಅ) ಅವರ ಶಾಂತಿಯ ಸಂದೇಶಗಳು ಹಾಗೂ ಜೀವನ ಶೈಲಿಯ ಬಗ್ಗೆ ನಾವು ಹೆಚ್ಚು ಅಧ್ಯಯನವನ್ನು ನಡೆಸಬೇಕು ಎಂದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಸದಸ್ಯರಾದ ಶೈಖುನಾ ಹಸ್ಸನ್ ಮುಸ್ಲಿಯಾರ್ ವಯನಾಡ್ ಅನ್ವಾರುಲ್ ಹುದಾದಲ್ಲಿ ಸಪ್ತ ವರ್ಷಗಳ ಸಮನ್ವಯ ಶಿಕ್ಷಣ ಪೂರ್ತಿಗೊಳಿಸಿದ ಯುವ ವಿದ್ವಾಂಸರಿಗೆ ಅನ್ವಾರೀ ಬಿರುದು ನೀಡಿ ಸಂಸ್ಥೆಯ ೨೦ನೇ ವಾರ್ಷಿಕೋತ್ಸವವನ್ನು ಘೋಷಿಸಿದರು.
ಅನ್ವಾರ್ನ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಹಾಕತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ವಖ್ಫ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷರಾದ ಮೌಲಾನ ಶಾಫಿ ಸಅದಿ ಬೆಂಗಳೂರು ಉದ್ಘಾಟಿಸಿ ಮಾತನಾಡಿದರು.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ, ಎಸ್ಜೆಎಂ ಪ್ರ.ಕಾರ್ಯದರ್ಶಿ ಶಂಸುದ್ದಿನ್ ಅಮ್ಜದ್ದಿ,ಕೊಡಗು ಸುನ್ನಿ ವೆಲ್ಫೇರ್ನ ಇಸ್ಮಾಯಿಲ್ ಅಯ್ಯಂಗೇರಿ, ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್,ಮಾಜಿ ವಖ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ಮಾರ್ಕಝ್ ಕೊಟ್ಟಮುಡಿಯ ಇಸ್ಮಾಯಿಲ್ ಸಖಾಫಿ, ಕೆಎಂಜೆ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು, ಅಬ್ದುಲ್ ಅಝೀಝ್ ತಂಙಳ್, ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಎಸ್ ವೈ ಎಸ್ ಕೋಶಾಧಿಕಾರಿ ಶರೀಫ್ ಮಾಸ್ಟರ್, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷರಾದ ಖಮರುದ್ದೀನ್ ಅನ್ವಾರಿ,ಕೋಶಾಧಿಕಾರಿ ನವಾಝ್ ಮದನಿ,ಇಸ್ಮಾಯಿಲ್ ಸಖಾಫಿ, ಖಾತಿಮ್ ತಂಙಳ್, ಎಸ್ವೈಎಸ್ ರಾಜ್ಯ ನಾಯಕರಾದ ಅಹ್ಮದ್ ಮದನಿ, ಯೂಸುಫ್ ಹಾಜಿ ಕೊಂಡAಗೇರಿ, ಸಲಾಂ ಕುಂಜಿಲ, ಶರೀಫ್ ಪಿರಿಯಾಪಟ್ಟಣ, ಕೊಡಗು ಸುನ್ನಿ ವೆಲ್ಫೇರ್ನ ಉಸ್ಮಾನ್ ನಾಪೋಕ್ಲು, ಹಾಫಿಝ್ ಉಮರ್ ಫಾರೂಖ್ ಸಖಾಫಿ, ಸಯ್ಯಿದ್ ಅಬ್ದುಲ್ ಖಾದರ್ ತಂಙಳ್, ಇಬ್ರಾಹಿಂ ಕಲ್ಲುಬಾಣೆ, ಉಮ್ಮರ್ ಕಲ್ಲುಬಾಣೆ, ನೌಫಲ್ ವೀರಾಜಪೇಟೆ, ಮೀಲಾದ್ ಜಾಥಾದ ಸ್ವಾಗತ ಸಮಿತಿಯ ಖಾಲಿದ್ ಫೈಝಿ ಅಂಬಟ್ಟಿ, ರಝಾಕ್ ಮಿಸ್ಬಾಹಿ ಕಾಟ್ರಕೊಲ್ಲಿ, ಕನ್ವೀನರ್ ಹಂಝ ಮದನಿ ಗುಹ್ಯ, ಬಾಪು, ಎಸ್ಎಸ್ಎಫ್, ಎಸ್ವೈಎಸ್, ಕೆಎಂಜೆ, ಎಸ್ ಜೆಎಂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. -ಅಶ್ರಫ್