ಪೊನ್ನAಪೇಟೆ, ಅ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೨ನೇ ವರ್ಷದ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಕಪ್‌ಗೆ ವರ್ಣರಂಜಿತ ತೆರೆ ಎಳೆಯಲಾಯಿತು. ವಾಲಿಬಾಲ್‌ನಲ್ಲಿ ಮುಂಡಚಾಡಿರ, ಥ್ರೋಬಾಲ್‌ನಲ್ಲಿ ಮಣವಟ್ಟಿರ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ರೋಚಕ ಫೈನಲ್ ಪಂದ್ಯ: ಮುಂಡಚಾಡಿರ ಮತ್ತು ಮನೆಯಪಂಡ ತಂಡಗಳ ನಡುವೆ ರಣ ರೋಚಕವಾಗಿ ನಡೆದ ವಾಲಿಬಾಲ್ ಫೈನಲ್ ಪಂದ್ಯ ಕೊನೆಯಕ್ಷಣದವರೆಗೂ ಕ್ರೀಡಾಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಮೊದಲ ಸೆಟ್‌ನಲ್ಲಿ ಮುಂಡಚಾಡಿರ ತಂಡ ೨೧-೧೬ ಅಂಕಗಳ ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಮನೆಯಪಂಡ ತಂಡ ೨೦-೧೭ ಅಂಕಗಳೊAದಿಗೆ ಸಮಬಲ ಸಾಧಿಸಿತು. ನಿರ್ಣಾಯಕ ಸೆಟ್‌ನಲ್ಲಿ ಜಿದ್ದಿಗೆ ಬಿದ್ದಂತೆ ರೋಚಕ ಆಟವಾಡಿದ ಎರಡೂ ತಂಡಗಳೂ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದವು. ಒಮ್ಮೆ ಮುಂಡಚಾಡಿರ ತಂಡ ಮುನ್ನಡೆ ಸಾಧಿಸಿದರೆ, ಮತ್ತೊಮ್ಮೆ ಮನೆಯಪಂಡ ತಂಡ ಮುನ್ನಡೆ ಸಾಧಿಸುತ್ತಾ ಮೈದಾನದಗಲಕ್ಕೂ ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳಿಗೆ ಕ್ರೀಡಾ ರಸದೌತಣ ನೀಡಿದವು.

ಅಂತಿಮವಾಗಿ ಮುಂಡಚಾಡಿರ ತಂಡ ೧೫-೧೩ ಅಂಕಗಳಿAದ ನಿರ್ಣಾಯಕ ಸೆಟ್ ಗೆದ್ದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ರಜಿತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂತಿಮ ಕ್ಷಣದವರೆಗೂ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದ ಮನೆಯಪಂಡ ತಂಡ, ಪ್ರತಿಭಾನ್ವಿತ ಆಟಗಾರ ಕುಟ್ಟಪ್ಪ ಅವರ ವಿರೋಚಿತ ಹೋರಾಟದ ಹೊರತಾಗಿಯೂ, ರನ್ನರ್ಸ್ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿತು.

ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಚಿರಿಯಪಂಡ ಮತ್ತು ಮಂಡುವAಡ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಂಡುವAಡ ತಂಡ ಗೆಲುವು ಸಾಧಿಸಿ, ಮೂರನೇ ಸ್ಥಾನ ಪಡೆದುಕೊಂಡರೆ, ಚಿರಿಯಪಂಡ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

ತೀವ್ರ ಕುತೂಹಲ ಕೆರಳಿಸಿದ್ದ ಥ್ರೋಬಾಲ್

ತೀವ್ರ ಕುತೂಹಲ ಕೆರಳಿಸಿದ್ದ ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಮಚ್ಚಮಾಡ ಹಾಗೂ ಮಣವಟ್ಟಿರ ತಂಡಗಳು ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದವು. ಅಂತಿಮವಾಗಿ ಮಣವಟ್ಟಿರ ತಂಡ ೨೧-೧೭ ಮತ್ತು ೨೩-೨೧ ನೇರ ಸೆಟ್‌ಗಳಿಂದ ಮಚ್ಚಮಾಡ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಗೆಲುವಿಗಾಗಿ ಸತತ ಪ್ರಯತ್ನ ಪಟ್ಟ ಮಚ್ಚಮಾಡ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸೆಮಿಫೈನಲ್‌ನಲ್ಲಿ ಪರಾಭವಗೊಂಡ ತಂಡಗಳಾದ ಕುಟ್ಟಂಡ ಮಾದಾಪುರ ಹಾಗೂ ಮಿದೇರಿರ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಿದೇರಿರ ತಂಡ ಜಯ ಸಾಧಿಸಿ, ಮೂರನೇ ಸ್ಥಾನ ಪಡೆದುಕೊಂಡರೆ, ಕುಟ್ಟಂಡ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

ಧ್ವಜ ಹಸ್ತಾಂತರ : ಇದೇ ಸಂದರ್ಭ ಮುಂದಿನ ವರ್ಷ ಪಂದ್ಯಾವಳಿ ನಡೆಸುವ ಚೇಂದ್ರಿಮಾಡ ತಂಡಕ್ಕೆ ಚಿರಿಯಪಂಡ ಕುಟುಂಬದವರು ವಾಲಿಬಾಲ್, ಥ್ರೋಬಾಲ್ ಕ್ರೀಡಾಕೂಟದ ಧ್ವಜ ಹಸ್ತಾಂತರಿಸಿದರು.

ಸಮಾರೋಪ ಸಮಾರಂಭ: ಚಿರಿಯಪಂಡ ಕುಟುಂಬದ ಅಧ್ಯಕ್ಷ ಚಿರಿಯಪಂಡ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರರಾಷ್ಟಿçÃಯ ಹಾಕಿ ಆಟಗಾರ ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಹಾಕಿ ಆಟ ಕೊಡವರ ರಕ್ತದಲ್ಲಿಯೇ ಬೆರೆತಿದೆ, ಹಾಕಿಯ ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಜೊತೆಗೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕೊಡವರು ಹಾಕಿಯಂತೆ ಎಲ್ಲಾ ಕ್ರೀಡೆಯಲ್ಲಿಯೂ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಹೊರತರಲು ಸೂಕ್ತ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದರು.

ಬೆAಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಆಶಾ ವಿವೇಕ್, ಕ್ರೀಡಾ ಸಮಿತಿ ಅಧ್ಯಕ್ಷ ಪಟ್ಟು ಸೋಮಯ್ಯ, ಮುಂದಿನ ವರ್ಷ ಪಂದ್ಯಾವಳಿ ನಡೆಸುವ ಕುಟುಂಬದ ಚೇಂದ್ರಿಮಾಡ ಗಣಪತಿ, ಕ್ರೀಡಾ ಅಧ್ಯಕ್ಷ ಚಿರಿಯಪಂಡ ರಾಕೇಶ್ ಪೂವಯ್ಯ, ಕಾರ್ಯದರ್ಶಿ ಪವನ್ ಬಿದ್ದಯ್ಯ, ನಿರ್ದೇಶಕ ದೀಪಕ್ ಸುಬ್ಬಯ್ಯ, ಕ್ರೀಡಾ ಸಮಿತಿಯ ಸದಸ್ಯರು, ಚಿರಿಯಪಂಡ ಕುಟುಂಬಸ್ಥರು ಹಾಜರಿದ್ದರು. ಕುಟುಂಬದ ಕಾರ್ಯಾಧ್ಯಕ್ಷ ಚಿರಿಯಪಂಡ ಕೆ.ಉತ್ತಪ್ಪ ಸ್ವಾಗತಿಸಿ, ಚಿರಿಯಪಂಡ ರಾಜ ನಂಜಪ್ಪ ವಂದಿಸಿದರು,

ಚಿರಿಯಪAಡ ಲತಾ ಪೂಣಚ್ಚ ಪ್ರಾರ್ಥಿಸಿ, ಚೋಕಿರ ಅನಿತಾ ದೇವಯ್ಯ ವೀಕ್ಷಕ ವಿವರಣೆ ನೀಡಿದರು. ಫೈನಲ್ ಪಂದ್ಯಕ್ಕೂ ಮುನ್ನ ಪುತ್ತಾಮನೆ ವಿದ್ಯಾ ಜಗದೀಶ್ ಅವರು ಚಿರಿಯಪಂಡ ವಾಲಿಬಾಲ್ ಥ್ರೋಬಾಲ್ ಪಂದ್ಯಾವಳಿಗಾಗಿ ತಾವೇ ರಚಿಸಿದ ಹಾಡನ್ನು ಹಾಡಿದರು. ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಮೂಡಿಬಂತು. - ವರದಿ: ಚನ್ನನಾಯಕ