ನಾಪೋಕ್ಲು, ಅ. ೫: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಪೌರ ಕಾರ್ಮಿಕರಿಗೆ ಗಂಬೂಟು ಮತ್ತು ಕೈಗ್ಲೌಸ್ ಅನ್ನು ವಿತರಿಸಿ ಸನ್ಮಾನಿಸಿ, ಗೌರವಿಸಲಾಯಿತು.

ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಎಂ.ಬಿ. ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ್ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಇಲ್ಲಿಯ ಪಟ್ಟಣದ ಪೌರ ಕಾರ್ಮಿಕರಾದ ವಿಶ್ವ, ಸೋಮಣ್ಣ, ರವಿ ಅವರುಗಳಿಗೆ ಗಂಬೂಟು ಮತ್ತು ಕೈ ಗ್ಲೌಸ್ ವಿತರಿಸಲಾಯಿತು.

ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ, ಖಜಾಂಚಿ ವಸಂತ ಮುತ್ತಪ್ಪ, ಸುಧಿ ತಿಮ್ಮಯ್ಯ, ರೇಷ್ಮಾ ಉತ್ತಪ್ಪ, ರಘು ತಿಮ್ಮಯ್ಯ, ಮೇರಿ ಚೆಟ್ಟಿಯಪ್ಪ, ಶುಭಾಷ್ ತಿಮ್ಮಯ್ಯ, ರೇಖಾ ಪೊನ್ನಣ್ಣ ಉಪಸ್ಥಿತರಿದ್ದರು.