ಕುಶಾಲನಗರ, ಅ. ೫: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ್ದ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಭಾನುವಾರ ಸಂಜೆ ಮರಳಿ ಶಿಬಿರಕ್ಕೆ ಬಂದಿವೆ.

ಈ ಬಾರಿಯ ದಸರಾದಲ್ಲಿ ಒಟ್ಟು ೧೪ ಆನೆಗಳು ಪಾಲ್ಗೊಂಡಿದ್ದು, ಅದರಲ್ಲಿ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಎರಡು ತಂಡಗಳಾಗಿ ತೆರಳಿದ್ದವು.

ದುಬಾರೆ ಶಿಬಿರದ ಧನಂಜಯ, ಗೋಪಿ, ಪ್ರಶಾಂತ್, ಕಂಜನ್, ಕಾವೇರಿ, ಸುಗ್ರೀವ, ಹೇಮಾವತಿ ಆನೆಗಳು ಎರಡು ತಂಡಗಳಲ್ಲಿ ಮೈಸೂರು ದಸರಾಕ್ಕೆ ತೆರಳಿದ್ದು, ವಿಶ್ವವಿಖ್ಯಾತ ಯಶಸ್ವಿ ದಸರಾದಲ್ಲಿ ಪಾಲ್ಗೊಂಡು ಲಾರಿಗಳ ಮೂಲಕ ಮೈಸೂರಿನಿಂದ ಶಿಬಿರಕ್ಕೆ ಕರೆತರಲಾಗಿದೆ.