ಮಡಿಕೇರಿ, ಅ. ೫: ಸರಕಾರಿ ಬಸ್ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಘಟನೆ ಮಡಿಕೇರಿ-ಕುಶಾಲನಗರ ಹೆದ್ದಾರಿ ನಡುವಿನಲ್ಲಿ ಸಂಭವಿಸಿದೆ.
ಮಡಿಕೇರಿಯಿಂದ ಕುಶಾಲನಗರಕ್ಕೆ ಮೈಸೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಇಬ್ಬನಿ ರೆಸಾರ್ಟ್ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು, ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯಿಂದ ತೆರಳುತ್ತಿದ್ದ ಬಸ್ಗೆ ಅಡ್ಡಲಾಗಿ ಮರದ ಕೊಂಬೆ ಎದುರಾಗಿದ್ದು, ಅದನ್ನು ತಪ್ಪಿಸಲು ಬಲಬದಿಗೆ ಬಸ್ಅನ್ನು ತಿರುಗಿಸಿದ ಸಂದರ್ಭ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ಪರಿಣಾಮ ಎರಡು ವಾಹನಕ್ಕೆ ಹಾನಿ ಸಂಭವಿಸಿದೆ.