ಕುಶಾಲನಗರ, ಅ. ೫: ಕುಶಾಲನಗರ ಕೇರಳ ಸಮಾಜ ಆಶ್ರಯದಲ್ಲಿ ಓಣಂ ಹಬ್ಬದ ಆಚರಣೆ ನಡೆಯಿತು.

ಕುಶಾಲನಗರ ಕೇರಳ ಸಮಾಜದ ಬಳಿಯಿಂದ ಮಾವೇಲಿ ವೇಷಧಾರಿಯ ಜೊತೆಯಲ್ಲಿ ಚಂಡೆ ವಾದ್ಯದ ಸಹಿತ ಸಭಾಂಗಣ ತನಕ ಮೆರವಣಿಗೆ ನಡೆಯಿತು.

ಸಮಾಜದ ಸದಸ್ಯರಿಗೆ ಬೆಳಿಗ್ಗೆ ಪೂಕಳಂ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರ, ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭ ಕೇರಳ ಸಮಾಜದ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಜಾಯ್ಸ್ ಲೀನಾ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಉಪಾಧ್ಯಕ್ಷ ಕೆ. ಬಾಬು, ಕಾರ್ಯದರ್ಶಿ ಕೆ.ಜೆ. ರಾಬಿನ್, ಸಹ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ. ಆನಂದ್, ನಿರ್ದೇಶಕರುಗಳಾದ ಕೆ. ವರದ, ಎಂ.ಜಿ. ಪ್ರಕಾಶ್, ಪಿ.ಕೆ. ಧನರಾಜ್, ಎನ್.ಎ. ಸುಶೀಲ, ವಿ.ಎಸ್. ಜಿತೇಶ್, ನಿರ್ಮಲ ಶಿವರಾಜ್, ಮತ್ತಿತರರು ಇದ್ದರು.