ಗೋಣಿಕೊಪ್ಪಲು, ಅ. ೫: ಕೊಡಗು ಜಿಲ್ಲೆಯ ವೀರಾಜಪೇಟೆಯ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ೨೦೨೩-೨೪ನೇ ಸಾಲಿನಲ್ಲಿ ತೋಡು ಹೂಳು ತೆಗೆಯುವ ಕಾಮಗಾರಿಯಲ್ಲಿ ಯಾವುದೇ ನ್ಯೂನತೆಗಳಿಲ್ಲವೆಂದು ಕರ್ನಾಟಕ ಒಂಬುಡ್ಸ್ ಪರ್ಸನ್ ಮೇಲ್ಮನವಿ ಪ್ರಾಧಿಕಾರ ಬೆಂಗಳೂರು ಮೇಲ್ಮನವಿ ಪ್ರಾಧಿಕಾರ ಆದೇಶ ನೀಡುವ ಮೂಲಕ ಕೊಡಗು ಜಿಲ್ಲಾ ಒಂಬುಡ್ಸ್ ಪರ್ಸನ್ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಹಾಲುಗುಂದ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ನಿವಾಸಿ ಪಂದಿಕAಡ ಹರೀಶ್ ಸೋಮಯ್ಯ ಕೊಡಗು ಜಿಲ್ಲಾ ಒಂಬುಡ್ಸ್ ಪರ್ಸನ್‌ರವರಿಗೆ ೨೦೨೩ರ ಡಿಸೆÀಂಬರ್ ತಿಂಗಳಿನಲ್ಲಿ ಕಾಮಗಾರಿಯ ಅನುಷ್ಠಾನಕ್ಕೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಸಮರ್ಪಕವಾದ ಸ್ಥಳ ಆಯ್ಕೆ ಮಾಡದೆ ತೋಡು ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸದೇ ಪಂಚಾಯಿತಿ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಜಮಾ ಮಾಡಿಕೊಂಡು ಹಣ ದುರುಪಯೋಗ ಪಡಿಸಿದ್ದಾರೆಂದು ಆರೋಪಿಸಿ ದೂರು ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಯವರು ಒಂಬುಡ್ಸ್ ಪರ್ಸನ್ ಬೆಂಗಳೂರುರªಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ’ ಪುಸ್ತಕ ಬಿಡುಗಡೆರಿಗೆ ಮೇಲ್ಮನವಿ ಸಲ್ಲಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿಯು ಸರ್ಕಾರದ ಮಾರ್ಗಸೂಚಿಯಂತೆ ಮಾಡಿರುವುದಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿತ್ತು

ಆರೋಪಿತರ ಅರ್ಜಿ ಹಾಗೂ ಪಂಚಾಯಿತಿಯ ಮೇಲ್ಮನವಿಯ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಒಂಬುಡ್ಸ್ ಪರ್ಸನ್ ಮೇಲ್ಮನವಿ ಪ್ರಾಧಿಕಾರ ಬೆಂಗಳೂರುರವರು ಅಂತಿಮವಾಗಿ ಮೇಲ್ಮನವಿಯನ್ನು ಪುರಸ್ಕರಿಸಿ ಕಾಮಗಾರಿಗೆ ಸಂಬAಧಿಸಿದAತೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿ ಪಂಚಾಯಿತಿಯ ಮೇಲ್ಮನವಿಯನ್ನು ಪುರಸ್ಕರಿಸಿ ಆದೇಶ ನೀಡಿದೆ.

ಉದ್ಯೋಗ ಖಾತ್ರಿ ಕೆಲಸ ಬೇರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಕೊಡಗಿನಲ್ಲಿ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗಿದೆ. ಆದರೂ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಸಮಪರ್ಕ ದಾಖಲಾತಿಗಳೊಂದಿಗೆ ಮತ್ತು ಕಾನೂನು ಚೌಕಟ್ಟಿನೊಳಗೆ ಕಟ್ಟುನಿಟ್ಟಾಗಿ ಕೆಲಸವನ್ನು ಮಾಡಲಾಗಿದೆ. ಆದ್ದರಿಂದ ತೀರ್ಪು ಪಂಚಾಯಿತಿಯ ಪರ ಬಂದಿರುತ್ತದೆ ಎಂದು ಅಧ್ಯಕ್ಷ ಪಂದಿಕAಡ ದಿನೇಶ್ ಕುಶ ಹೇಳಿದ್ದಾರೆ.