ವೀರಾಜಪೇಟೆ, ಅ. ೭: ಡಾ. ಉತಪ್ಪ ಯು.ಟಿ. ಅವರು “ವಿಶ್ವದ ಅಗ್ರ ೨% ವಿಜ್ಞಾನಿಗಳು” (೨೦೨೫ರ ಸಮೀಕ್ಷೆ) ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಪ್ರತಿ ವರ್ಷ, ಅಮೇರಿಕಾದ ಸ್ಟಾ÷್ಯಂಫರ್ಡ್ ವಿಶ್ವವಿದ್ಯಾಲಯ ‘ವಿಶ್ವದ ಅಗ್ರ ೨% ವಿಜ್ಞಾನಿಗಳು’ ಎಂಬ ಪಟ್ಟಿಯಲ್ಲಿ ಪ್ರಕಟಿಸುತ್ತಾರೆ. ಡಾ. ಉತಪ್ಪ ಯು.ಟಿ. ಅವರು ಪ್ರಸ್ತುತ ಚೀನಾದ ಶೆನ್ಜೆನ್ ವಿಶ್ವವಿದ್ಯಾಲಯದ ರಾಸಾಯನಶಾಸ್ತç ಮತ್ತು ಪರಿಸರ ಇಂಜಿನಿಯರಿAಗ್ ಕಾಲೇಜಿನಲ್ಲಿ ಪೋಸ್ಟ್-ಡಾಕ್ಟರಲ್ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮೊದಲು ಅವರು ದಕ್ಷಿಣ ಕೊರಿಯಾದ ಚೋನ್ನಮ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ (೨೦೨೧-೨೦೨೨) ಪೋಸ್ಟ್-ಡಾಕ್ಟರಲ್ ಫೆಲೋ ಆಗಿ ಹಾಗೂ ಯಾಂಗ್ನಮ್ ಯೂನಿವರ್ಸಿಟಿಯಲ್ಲಿ (೨೦೨೨-೨೦೨೩) ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ಉತ್ತಪ್ಪ ಅವರು ಬೆಂಗಳೂರು ನಗರದಲ್ಲಿರುವ ಜೈನ್ ವಿಶ್ವವಿದ್ಯಾಲಯದಿಂದ (೨೦೨೧) ರಾಸಾಯನಶಾಸ್ತçದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಉತ್ತಪ್ಪ ಅವರು ಅಂತರರಾಷ್ಟಿçÃಯ ಖ್ಯಾತಿಯ ವಿಮರ್ಶಿತ ವಿಜ್ಞಾನ ಪತ್ರಿಕೆಗಳಲ್ಲಿ ೫೦ ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ೨೩೦೦ ಕ್ಕೂ ಹೆಚ್ಚು ಉಲ್ಲೇಖಗಳು (ಛಿiಣಚಿಣioಟಿ) ಪಡೆದಿದ್ದಾರೆ.
ಡಾ. ಉತ್ತಪ್ಪ ಅವರು ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಉಳುವಂಗಡ ಸಾಬು ತಮ್ಮಯ್ಯ ಹಾಗೂ ಉಳುವಂಗಡ ಮೀನಾ ಅವರ ಪುತ್ರ. ಪ್ರಸ್ತುತ ಇವರು ಚೀನಾ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.