*ಗೋಣಿಕೊಪ್ಪ, ಅ. ೮: ಹಿಂದೂ ದೇವರನ್ನು ಹೀಯಾಳಿಸುವ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಕುತಂತ್ರ ಪರೋಕ್ಷವಾಗಿ ನಡೆಯುತ್ತಿದೆ. ಈ ಬಗ್ಗೆ ಪ್ರತಿಯೊಬ್ಬ ಹಿಂದೂ ಜಾಗೃತರಾಗಬೇಕು ಎಂದು ಮಾಚಿಮಾಡ ಎಂ. ರವೀಂದ್ರ ಕರೆ ನೀಡಿದರು. ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಿತಿಮತಿ ಮಂಡಲದಿAದ ರಾಷ್ಟಿçÃಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಬೈಠಕ್‌ನಲ್ಲಿ ಅವರು ಮಾತನಾಡಿದರು.
ರಾಷ್ಟಿçÃಯ ಸ್ವಯಂಸೇವಕ ಸಂಘವು ದೇಶದ ಬಲಿಷ್ಠ ಸಂಘವಾಗಿ ಬೆಳೆಯುತ್ತಿದೆ. ಹಿಂದೂ ಧರ್ಮದ ಭದ್ರತೆಗೆ ಕೆಲಸ ನಿರ್ವಹಿಸುತ್ತಿದೆ. ಮಹಾರಾಷ್ಟçದಲ್ಲಿ ಪ್ರಾರಂಭವಾದ ಸಂಘಟನೆಯು ತದನಂತರ ದೇಶದಾದ್ಯಂತ ವಿಸ್ತಾರಗೊಂಡು ಹಿಂದೂ ಸಮಾಜದ ಶಕ್ತಿಯಾಗಿ ಕಾಣಿಸಿಕೊಂಡಿದೆ. ಲಕ್ಷಾಂತರ ಸ್ವಯಂಸೇವಕರು ಪ್ರತಿಷ್ಠೆ ಬಿಟ್ಟು ಧರ್ಮಕ್ಕಾಗಿ ಈ ದೇಶದ ಹಿಂದುತ್ವದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಇಂದು ಸಮಾಜವನ್ನು ಮತಾಂತರದ ಮೂಲಕ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಧರ್ಮವನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಸ್ವಯಂ ಸೇವಾ ಸಂಘಟನೆ ಸಕ್ರಿಯವಾಗಿ ಇರುವವರೆಗೂ ಇದು ಅಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ರವೀಂದ್ರ ಎಚ್ಚರಿಸಿದರು.
ಬೈಠಕ್‌ನಲ್ಲಿ ಗಣವೇಶಧಾರಿ ಸ್ವಯಂ ಸೇವಕರು ಭಾಗವಹಿಸಿದ್ದರು. ಸಂಘ ಧ್ವಜವಂದನೆ, ಸಂಘದ ಪ್ರಾಂತ ಗೀತೆಗಳ ಮೂಲಕ ರಾಷ್ಟçಪ್ರೇಮವನ್ನು ಮೂಡಿಸಲಾಯಿತು.