ಸೋಮವಾರಪೇಟೆ, ಅ. ೮: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾ. ೧೮ ರಂದು ಸೋಮವಾರಪೇಟೆ ಪಟ್ಟಣದಲ್ಲಿ ಪವಿತ್ರ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ತಿಳಿಸಿದ್ದಾರೆ. ತಾ. ೧೭ ರಂದು ತಲಕಾವೇರಿಯಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವದಂದು ತೀರ್ಥವನ್ನು ಸಂಗ್ರಹಿಸಿ ತಾ. ೧೮ ರಂದು ೧೧ ಗಂಟೆಗೆ ಪಟ್ಟಣದಲ್ಲಿರುವ ಶ್ರೀ ಕಾವೇರಿ ಪ್ರತಿಮೆಗೆ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ವಿಶೇಷ ಪೂಜೆ ಸಲ್ಲಿಸಿದ ನಂತರ ೧೧.೩೦ ರಿಂದ ಜೇಸೀ ವೇದಿಕೆಯಲ್ಲಿ ಭಕ್ತಾದಿಗಳಿಗೆ ತೀರ್ಥ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.