ಸೋಮವಾರಪೇಟೆ ತಾಲೂಕು ಆಡಳಿತ
ಸೋಮವಾರಪೇಟೆ, ಅ. ೮: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಬೃಹತ್ ಗ್ರಂಥವಾದ ರಾಮಾಯಣದಲ್ಲಿ ಬದುಕಿನ ಸಂದೇಶ ಅಡಗಿದೆ. ಇದು ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅಭಿಪ್ರಾಯಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಾಲ್ಮೀಕಿಯವರು ರಾಮಾಯಣ ರಚಿಸುವ ಮೂಲಕ ಸಮಾಜಕ್ಕೆ ಬದುಕಿನ ಸಂದೇಶ ನೀಡಿದ್ದಾರೆ. ಪ್ರತಿಯೊಂದು ಪಾತ್ರಗಳೂ ಸಹ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಇಂತಹ ಮಹಾನ್ ದಾರ್ಶನಿಕರ ಆದರ್ಶಗಳು ಸಮಾಜಕ್ಕೆ ಅವಶ್ಯಕವಾಗಿವೆ. ಮುಂದಿನ ದಿನಗಳಲ್ಲಿ ಹಾಡಿಗಳಲ್ಲೂ ಕಾರ್ಯಕ್ರಮ ನಡೆಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಚಿಕ್ಕ ಅಳುವಾರ ಬಯೋಕೆಮೆಸ್ಟ್ರಿ ವಿಭಾಗದ ಪ್ರಾಧ್ಯಾಪಕ ಡಾ. ಧರ್ಮಪ್ಪ ಕೆ.ಕೆ. ಅವರು ಮಾತನಾಡಿ, ಮಹಾನ್ ದಾರ್ಶನಿಕರನ್ನು ಕೇವಲ ಒಂದು ವರ್ಗಗಳಿಗೆ ಮಾತ್ರ ಸೀಮಿತ ಮಾಡಬಾರದು. ರಾಮಾಯಣ ಕೇವಲ ಭಾರತ ಮಾತ್ರವಲ್ಲ; ವಿದೇಶಗಳಲ್ಲೂ ಮಾನ್ಯತೆ ಹೊಂದಿದೆ. ರಾಮಾಯಣವು ಬದುಕಿನ ಕೆಲ ಮೂಲ ಸೂತ್ರಗಳನ್ನು ತಿಳಿಹೇಳುವ ಎಳೆಗಳನ್ನು ಹೊಂದಿರುವ ಸಂಕಲನವಾಗಿದೆ. ವಾಲ್ಮೀಕಿಯವರ ಮಹದಾಶಯಗಳನ್ನು ಅರ್ಥಮಾಡಿಕೊಂಡು ಹೆಜ್ಜೆ ಹಾಕಬೇಕು ಎಂದರು. ದ.ಸಂ.ಸ ಮುಖಂಡರಾದ ಜಯಪ್ಪ ಹಾನಗಲ್ಲು ಮಾತನಾಡಿ, ತಳಮಟ್ಟದ ಸಮುದಾಯದಲ್ಲಿ ಹುಟ್ಟಿದ ಮಹರ್ಷಿ ವಾಲ್ಮೀಕಿಯವರು, ಅಕ್ಷರ, ಜ್ಞಾನ ಮರೀಚಿಕೆಯಾಗಿದ್ದ ಸಮಯದಲ್ಲಿ ವಿಶ್ವದ ಅತ್ಯುನ್ನತ ಗ್ರಂಥವಾದ ರಾಮಾಯಣವನ್ನು ರಚಿಸಿರುವುದು ಆಶ್ವರ್ಯ ತರಿಸುತ್ತದೆ. ರಾಮಾಯಣ ಇಂದಿಗೂ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿದೆ ಎಂದರು. ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಮಾತನಾಡಿ, ಕಾಡಿನಲ್ಲಿದ್ದ ರತ್ನಾಕರ ನಂತರ ರಾಮಾಯಣ ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿಯಾದ ವೃತ್ತಾಂತವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸದಸ್ಯೆ ಶೀಲಾ ಡಿಸೋಜ, ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಕೆ.ಡಿ.ಪಿ. ಸದಸ್ಯ ಔರಂಗಜೇಬ್, ವೇದಕುಮಾರ್, ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಬ್ಯಾಡಗೊಟ್ಟ ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಿಣಿ,
ವಿವಿಧ ಸಂಘಟನೆಗಳ ಮುಖಂಡರಾದ ಬಿ.ಈ. ಜಯೇಂದ್ರ, ಕುಮಾರಸ್ವಾಮಿ, ನಿರ್ವಾಣಪ್ಪ, ಹೊನ್ನಪ್ಪ, ಈರಪ್ಪ ಸೇರಿದಂತೆ ಇತರರು ಇದ್ದರು. ಶಿಕ್ಷಕಿ ರಾಣಿ ರವೀಂದ್ರ, ಸಿ.ಡಿ.ಪಿ.ಓ. ಕಚೇರಿಯ ಸಾವಿತ್ರಿ, ಆಶ್ರಮ ಶಾಲೆಯ ಮುಖ್ಯಶಿಕ್ಷಕ ರಜನಿಕಾಂತ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಈರ್ವರು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ ಕೆ.ಕೆ. ಧರ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರ ತಾಲೂಕು ಆಡಳಿತ
ಕೂಡಿಗೆ, ಅ. ೮: ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಮುಳ್ಳುಸೋಗೆ ವಾಲ್ಮೀಕಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಕುಶಾಲನಗರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸಾಹಿತಿ ಹಾಗೂ ಚಿಂತಕ ಡಾ. ಹೆಚ್.ಕೆ. ನರಸಿಂಹಮೂರ್ತಿ ಅವರು ವಾಲ್ಮೀಕಿ ಜಯಂತಿ ಕುರಿತು ಮಾತನಾಡಿದರು. ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯು ಬೆಳೆದು ಬಂದ ವಿಧಾನ, ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಸಮಾಜಕ್ಕೆ ಕಟ್ಟಿಕೊಟ್ಟ ಕಾವ್ಯ ಎಂದು ಬಣ್ಣಿಸಿದರು. ಜಗತ್ತಿನ ಮೊದಲ ಕಾವ್ಯ ರಚಿಸಿದ ಕೀರ್ತಿ ವಾಲ್ಮೀಕಿ ಮಹರ್ಷಿ ಅವರದ್ದಾಗಿದೆ ಎಂದರು. ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಮಾತನಾಡಿ, ವಾಲ್ಮೀಕಿ ಮಹರ್ಷಿ ರಚಿಸಿದ ರಾಮಾಯಣ ಕೃತಿಯ ಮಹತ್ವದ ಬಗ್ಗೆ ವಿವರಿಸಿದರು. ರಾಮಾಯಣ ರಚಿಸುವ ಮೂಲಕ ಮಹರ್ಷಿಗಳು ಸಮಗ್ರ ಭಾರತೀಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದ್ದಾರೆ. ಸರ್ವರೂ ಇವರ ಸಾಧನೆಗೆ ಗೌರವ ಸಮರ್ಪಣೆ ಮಾಡಬೇಕಿದೆ ಎಂದರು. ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ವಾಲ್ಮೀಕಿ ಮಹಿರ್ಷಿ ಭಾರತೀಯ ಪುರಾಣ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ ಮಹಾನ್ ಖುಷಿ, ವಾಲ್ಮೀಕಿ ಅವರ ರಾಮಾಯಣದ ಮೂಲಕ ನಾವು ನೈತಿಕತೆ, ಧೈರ್ಯ, ಶ್ರಧ್ಧೆ ಭಕ್ತಿಯ ಗುಣಗಳ ಮೂಲಕ ಭ್ರಾತೃತ್ವ ಭಾವನಾತ್ಮಕ ಸಂಬAಧಗಳ ಮುಖೇನ ಜ್ಞಾನಾಭಿವೃಧ್ಧಿಯ ಯಶಸ್ಸು ಕಾಣಲು ಸಾಧ್ಯ. ಇವರ ಆದರ್ಶಗಳ ಸಾಧನೆ ಉನ್ನತ ವಿಚಾರಗಳು ಎಂದೆAದಿಗೂ ಸ್ಮರಣೆ ಎಂದು ಸವಿಸ್ತಾರವಾದ ವಿಷಯಗಳ ಬಗ್ಗೆ ತಿಳಿಸಿದರು. ವಾಲ್ಮೀಕಿನವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ ಎಂದರು. ಜಿಲ್ಲಾ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಕೆ.ಎನ್. ಆಶೋಕ್ ಮಾತಾನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮವು ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆಯಿತು. ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷö್ಮಮ್ಮ, ಸದಸ್ಯರಾದ ಜಯಲಕ್ಷಿö್ಮ ನಂಜುAಡಸ್ವಾಮಿ, ವಿ.ಜೆ. ನವೀನ್, ಮುಖ್ಯಾಧಿಕಾರಿ ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ತಾಲೂಕು ಪಂಚಾಯತಿ ಅಧಿಕಾರಿ ಶ್ರೀನಿವಾಸ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಬಿ. ರಾಜು, ದಾಮೋದರ್, ಸಿದ್ದಪ್ಪ, ಎಂ.ಕೃಷ್ಣ, ಚಂದನ್ ಕುಮಾರ್, ಶ್ರೀನಿವಾಸ್, ಸಂತೋಷ್, ಕರಿಯಪ್ಪ, ಸುಶೀಲಾ, ಸ್ವಾಮಿ, ರಮೇಶ್, ಸುರೇಶ್, ಡಯಟ್ ಉಪನ್ಯಾಸಕಿ ಪುಷ್ಪಾ, ಜಿಲ್ಲಾ ಸಮಿತಿ ನಿರ್ದೇಶಕರು, ಮತ್ತಿತರರು ಇದ್ದರು.