ಕೂಡಿಗೆ, ಸೆ. ೮: ಕುಶಾಲನಗರ-ಹಾರಂಗಿ ರಸ್ತೆಯ ೧೦ ಕೋಟಿ ವೆಚ್ಚದ ಕಾಮಗಾರಿಯ ಶೇ.೯೫ರಷ್ಟು ಮುಕ್ತಾಯಗೊಂಡು ಅಣೆಕಟ್ಟೆಯ ಮುಂಭಾಗದ ಕಿರು ಸೇತುವೆಯ ಕಾಮಗಾರಿಯು ಇದೀಗ ಪೂರ್ಣಗೊಂಡು ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಮುಕ್ತಗೊಂಡಿದೆ.
ಕಳೆದ ವಾರ ಇದೇ ರಸ್ತೆಯಲ್ಲಿ ಪ್ರವಾಸಿಗರ ವಾಹನ ಗುಂಡಿಗೆ ವಾಲಿದ ಹಿನ್ನೆಲೆಯಲ್ಲಿ ಇದೀಗ ಗುತ್ತಿಗೆದಾರ ಕಿರು ಸೇತುವೆಯ ಸಮೀಪದಲ್ಲಿ ಸಿಮೆಂಟ್ ಮಿಶ್ರಿತ ಕಾಂಕ್ರಿಟ್ ಹಾಕಿ ಸರಿಪಡಿಸಿದ್ದು, ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ.