ನಾಪೋಕ್ಲು, ಅ. ೧೦: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಕಾರದೊಂದಿಗೆ ಬೆಂಗಳೂರಿನ ಗಾಲ್ಫ್ ಕ್ಲಬ್ ನಲ್ಲಿ ಜರುಗಿತು .
ನÀವೆಂಬರ್ ೩೦ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಗೌರವ ಪ್ರಶಸ್ತಿ ಸಮಾರಂಭದ ಬಗ್ಗೆ ಹಲವು ಸಲಹೆ ಸೂಚನೆಗಳೊಂದಿಗೆ ಚರ್ಚಿಸಿ ಎಲ್ಲರ ಸಹಮತದೊಂದಿಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷÀ ಡಾ. ರಾಜೇಶ್ ತೇನನ ಸೇರಿದಂತೆ ಕೊಡಗು ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ, ಗೌಡ ಸಮಾಜ ದಾಸರಹಳ್ಳಿ, ಗೌಡ ಸಮಾಜ ಯಲಹಂಕ, ಕೊಡಗು ದಕ್ಷಿಣ ಕನ್ನಡ ಗೌಡ ಕ್ರೆಡಿಟ್ ಕೋ ಸೊಸೈಟಿ, ಕೆಂಪೇಗೌಡ ರೂರಲ್ ಹೌಸಿಂಗ್