ಮಡಿಕೇರಿ, ಅ. ೯: ೨೦೨೫-೨೬ನೇ ಸಾಲಿನ ಎನ್.ಎಂ.ಎA.ಎಸ್.(ನ್ಯಾಷನಲ್ ಮೀನ್ಸ್ ಕಂ ಮೆರಿಟ್) ವಿದ್ಯಾರ್ಥಿ ವೇತನ ಪರೀಕ್ಷೆಗೆ ಹೆಸರು ನೋಂದಾಯಿಸಲು ತಾ. ೧೫ ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎನ್.ಎಂ.ಎA.ಎಸ್. ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪಡೆದಿದ್ದು, ಶಾಲೆಯ ಮೂಲಕ ಆನ್ಲೈನ್ ಮೂಲಕ ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು.
ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿ-ಪೋಷಕರ ವಾರ್ಷಿಕ ಆದಾಯವು ಗರಿಷ್ಠ ರೂ. ೩.೫ ಲಕ್ಷ ಇರಬೇಕು. ಅಂತಹ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
ಜಿಲ್ಲೆಯಿಂದ ಹೆಚ್ಚಿನ ಮಕ್ಕಳು ಈ ಪರೀಕ್ಷೆಯನ್ನು ತೆಗೆದುಕೊಂಡು ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದುಕೊಳ್ಳಲು ಶಾಲಾ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ನೋಂದಣಿ ಮಾಡಿಸಬೇಕು ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಸಂಸ್ಥೆ (ಡಯಟ್)ಯ ಉಪ ನಿರ್ದೇಶಕ (ಅಭಿವೃದ್ಧಿ) ರಾದ ಪ್ರಾಂಶುಪಾಲ ಡಿ. ಉದಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ೭ನೇ ತರಗತಿಯಲ್ಲಿ ಶೇ. ೫೫ ಕ್ಕಿಂತ ಹೆಚ್ಚು ಅಂಕ ಪಡೆದ ಸಾಮಾನ್ಯ ಮತ್ತು ಹಿಂದುಳಿದ ವರ್ಗ(ಓ.ಬಿ.ಸಿ.)ದ ವಿದ್ಯಾರ್ಥಿಗಳು ಹಾಗೂ ಶೇ. ೫೦ ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದಿರುತ್ತಾರೆ ಎಂದು ತಿಳಿಸಲಾಗಿದೆ.
ಎನ್.ಎಂ.ಎA.ಎಸ್. ಪರೀಕ್ಷೆಯು ಡಿಸೆಂಬರ್ನಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ೯ನೇ ತರಗತಿಯಿಂದ ೧೨ನೇ ತರಗತಿಯವರೆಗೆ ಪ್ರತಿ ತಿಂಗಳು ೧ ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಕೂಡಿಗೆ ಡಯಟ್ ಸಂಸ್ಥೆ ಹಾಗೂ ಎನ್.ಎಂ.ಎA.ಎಸ್. ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ : ಕೆ.ಎಸ್. ನಳಿನಾಕ್ಷಿ (ಮೊ: ೮೧೩೯೯ ೫೬೮೦೨) ಹಾಗೂ ತಾಲೂಕು ನೋಡಲ್ ಅಧಿಕಾರಿ ಜೆನೆಟ್, ಮಡಿಕೇರಿ (ಮೊ: ೯೯೮೬೩ ೬೭೦೦೧), ಎಸ್.ಎಸ್. ಶಿವಕುಮಾರ್, ಸೋಮವಾರಪೇಟೆ (ಮೊ: ೯೪೮೦೭ ೬೮೮೮೬) ಹಾಗೂ ವಿಶಾಲಾಕ್ಷಿ, ವೀರಾಜಪೇಟೆ (ಮೊ: ೮೧೯೭೧೯೯೯೪೧) ಅವರನ್ನು ಸಂಪರ್ಕಿಸಬಹುದಾಗಿದೆ.