ನಾಪೋಕ್ಲು, ಅ. ೧೦: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯಿತಿ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ನೋಡೆಲ್ ಅಧಿಕಾರಿ ಬಾಲಕೃಷ್ಣ ರೈ ಕೆ, ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಂಚಾಯಿತಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಯಿತು. ಅಧ್ಯಕ್ಷ ಕುಶನ್ ರೈ ಮಾತನಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸುವ ಕಾರ್ಯ ಆಗಬೇಕೆಂದು ಆಲೋಚಿಸಿದ್ದೆವು. ಗ್ರಾಮ ಸಭೆಯಲ್ಲಿ ಕುಂದುಕೊರತೆಯನ್ನು ತಿಳಿಸಿದ್ದ ಹಿನ್ನೆಲೆ ಸಾರ್ವಜನಿಕರಿಗೂ ಹಾಗೂ ಸಮಾಜಕ್ಕೂ ಉತ್ತಮ ಕೆಲಸಗಳು ನಡೆಯುತ್ತ್ತಿದೆ.ಸಾರ್ವಜನಿಕ ರÀಕಸಹಕಾರ ಸಲಹೆಯಿಂದ ಮಾತ್ರ ಉತ್ತಮ ಕಾರ್ಯ ನಡೆಯುತ್ತದೆ ಎಂದರು.
ಸಭೆಯಲ್ಲಿ ಕಂದಾಯ ಇಲಾಖೆಯ ಅಕ್ಷತಾ ಶೆಟ್ಟಿ ಬಿ, ಚೆಸ್ಕಾಂ ಜೂನಿಯರ್ ಇಂಜಿನಿಯರ್ ಚೈತ್ರೇಶ್ ಸಿ.ಎಸ್, ಆರೋಗ್ಯ ಇಲಾಖೆಯ ಹೇಮಲತಾ, ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ದರ್ಶನ್, ಪೊಲೀಸ್ ಇಲಾಖೆ ಹರೀಶ್ ಐ.ಎಲ್, ಗಜಲಕ್ಷಿö್ಮ ಜಿ.ಸಿ. ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗದ ರಘು, ಅರಣ್ಯ ಇಲಾಖೆ ಅಧಿಕಾರಿ ಭವ್ಯ ಹಾಜರಿದ್ದು ಇಲಾಖೆ ಸೌಲಭ್ಯಗಳನ್ನು ವಿವರಿಸಿ ಹಾಗೂ ಸಾರ್ವಜನಿಕರ ತೊಂದರೆಗಳಿಗೆ ಪರಿಹಾರ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಬಾಲಕೃಷ್ಣ ರೈ ಕೆ. ಮಾತನಾಡಿ ತಮ್ಮ ಇಲಾಖೆಯಲ್ಲಿ ಇರುವಂತ ಸವಲತ್ತುಗಳ ಬಗ್ಗೆ ವಿವರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆÀ ರೇಖಾ ಬಾಲು ಬಿ.ಎಸ್, ಸದಸ್ಯರಾದ ಮುಂಡAಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮೂಡೆರ ಶರ್ಮಿಳಾ ಮನು, ಪಾರೆಮಜುಲು ರೀತಾ ಸುದರ್ಶನ್, ಪುಷ್ಪ ಎಂ ಏನ್, ಯಶ್ವಿನ್ ಪೊನ್ನಪ್ಪ, ಮುಂಡAಡ ಪವಿ ಸೋಮಣ್ಣ, ಮುಕ್ಕಾಟಿರ ಸೌಮ್ಯ ಸತೀಶ್, ಬೈಲೋಳಿ ಸುಮ ಸುಂದರಿ, ಹೆಚ್.ಎನ್. ನಿಂಗಪ್ಪ, ಶೃತಿ ಹೆಚ್.ಡಿ, ಹೀರ ಸುಬ್ಬಯ್ಯ, ರಘು, ಪಿ.ಡಿ.ಓ. ಚಂದ್ರಮೌಳಿ ಕೆ.ಎಂ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.