ಮಡಿಕೇರಿ, ಅ. ೧೦: ನಗರದ ಫೋಟೋ ಸ್ಟುಡಿಯೋವೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆ. ೨೭ ರಂದು ರಾತ್ರಿ ವೇಳೆ ಮಡಿಕೇರಿಯ ಕೊಹಿನೂರು ರಸ್ತೆಯ ಕಾಂಪ್ಲೆಕ್ಸ್ನಲ್ಲಿರುವ ಅಬ್ದುಲ್ ರೆಹಮಾನ್ ಮಾಲೀಕತ್ವದ ಸ್ಟುಡಿಯೋದ ಶೆಟ್ಟರ್ ಒಡೆದು ಬೆಲೆಬಾಳುವ ಪ್ರಿಂಟರ್ ಸೇರಿದಂತೆ ಕೆಲ ಉಪಕರಣಗಳನ್ನು ಮುಸುಕುಧಾರಿ ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಮಾಲೀಕ ಅಬ್ದುಲ್ ರೆಹಮಾನ್ ನೀಡಿದ ದೂರಿನ ಅನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡು ಐವರು ಆರೋಪಿಯನ್ನು ಬಂಧಿಸಿರುವ ಪೊಲೀಸರು ಇಂದು ಕೃತ್ಯ ನಡೆಸಿದ ಸ್ಥಳಕ್ಕೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೇತು ಗ್ರಾಮದ ಮಹಮ್ಮದ್ ಸುಹೇಲ್ (೨೪) ಹೊದವಾಡ ಗ್ರಾಮದ ಮಹಮ್ಮದ್ ಮುಬಶೀರ್ (೨೦), ಕುಂಜಿಲ ಗ್ರಾಮದ ಮಹಮ್ಮದ್ ಜೈನುದ್ದೀನ್ (೨೦), ಕೊಳಕೇರಿ ಗ್ರಾಮದ ಮುಜಾಮಿಲ್ (೨೦), ಬೇತು ಗ್ರಾಮದ ಫಯಾಜ್ (೨೫) ಬಂದಿತ ಆರೋಪಿಗಳಾಗಿದ್ದಾರೆ.
ಬಂದಿತರಿAದ ಒಂದು ಕಲರ್ ಪ್ರಿಂಟರ್, ಕೇಬಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂದಿತರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಕಲಂ ೩೩೧(೩), ೩೩೧ (೪), ೩೦೫ ಬಿಎನ್ಎನ್ಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಬಾರ ಡಿವೈಎಸ್ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಪಿ.ಕೆ. ರಾಜು, ಠಾಣಾಧಿಕಾರಿ ಅನ್ನಪೂರ್ಣ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.