ನಾಪೋಕ್ಲು, ಅ. ೯: ಜಗತ್ತಿನಲ್ಲೇ ಅತಿ ಎತ್ತರ ಪ್ರದೇಶದಲ್ಲಿನ ಮ್ಯಾರಥಾನ್ ಅನ್ನು ಕೊಡಗಿನ ಯುವತಿ ಕರವಟ್ಟಿರ ಚೈತ್ರ ಪಳಂಗಪ್ಪ ಅವರು ಪೂರೈಸಿ ಸಾಧನೆ ಗೈದಿದ್ದಾರೆ. ಸಮುದ್ರ ಮಟ್ಟದಿಂದ ೧೭,೬೦೦ ಅಡಿ ಎತ್ತರದಲ್ಲಿನ ವಾಯುಭಾರ ಕಡಿಮೆ ಇರುವ ಖರ್ದುಂಗ್ಲ ಪಾಸ್‌ನಲ್ಲಿ ವಾರ್ಷಿಕ ಆಯೋಜಿಸುವ ಲಡಾಕ್ ಮ್ಯಾರಥಾನ್ ನಲ್ಲಿ ಚೈತ್ರ ಈ ಸಾಧನೆ ಮಾಡಿದ್ದಾರೆ.

ಸಾಂಪ್ರದಾಯಿಕ ಮ್ಯಾರಥಾನ್ ೪೨ ಕಿ.ಮೀ ದೂರವಿದ್ದು, ಖರ್ದುಂಗ್ಲ ಮ್ಯಾರಥಾನ್‌ನಲ್ಲಿ ಕಡಿಮೆ ವಾಯುಭಾರ, ಕ್ಲಿಷ್ಟಕರ ಮಾರ್ಗದಲ್ಲಿ ೭೨ ಕಿ.ಮೀ ಕ್ರಮಿಸುವ ಅಗತ್ಯವಿದೆ. ಡೆಕಾಥ್ಲಾನ್ ಕ್ರೀಡಾ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಈ ಮ್ಯಾರಥಾನ್ ಪೂರೈಸಿ ಸಾಧನೆ ಗೈದಿದ್ದಾರೆ. ಇವರು ಯವಕಪಾಡಿ ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕರವಟ್ಟಿರ ಪಳಂಗಪ್ಪ - ಕಾಂತಿ ದಂಪತಿಯ ಪುತ್ರಿ