ಚೆಯ್ಯಂಡಾಣೆ, ಅ. ೯: ವೀರಾಜಪೇಟೆ ನಾಫೋಕ್ಲು ಮುಖ್ಯ ರಸ್ತೆಯ (ರಾಜ್ಯ ಹೆದ್ದಾರಿ ಎಸ್ ಎಚ್ ೯೦)ಚೆಯ್ಯಂಡಾಣೆಯಿAದ ಕಡಂಗದ ವರೆಗೆ ರಸ್ತೆ ಹÀದಗೆಟ್ಟು ೨೦ ಕ್ಕೂ ಅಧಿಕ ವರ್ಷಗಳು ಕಳೆದರು ರಸ್ತೆ ದುರಸ್ತಿ ಮಾತ್ರ ನಡೆಯುತ್ತಿಲ್ಲ. ವಾಹನ ಸವಾರರು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದೆ ಕಷ್ಟಕರವಾಗಿ ಪರಿಣಮಿಸಿದೆ. ಕಾವೇರಿ ತೀರ್ಥೋದ್ಭವಕ್ಕೂ ಮುಂಚೆ ಈ ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಚೆಯ್ಯಂಡಾಣೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುಂಡಿ ಬಿದ್ದ ರಸ್ತೆಯಲ್ಲಿ ನೀರು ತುಂಬಿ ಹಲವಾರು ಅವಘಡಗಳು ಸಂಭವಿಸಿವೆ. ಕರಡ ಸೇತುವೆ ರಸ್ತೆಯ ಬದಿಯಲ್ಲಿರುವ ಬರೆಗಳು ಜರಿದು ಚರಂಡಿ ಮುಚ್ಚಿ ವರ್ಷಗಳೇ ಕಳೆದರು ಮಣ್ಣು ತೆರವು ಗೊಳಿಸಿಲ್ಲ. ಈ ರಸ್ತೆ ಮೈಸೂರು,ಹುಣಸೂರು,ಭಾಗಮಂಡಲ,ಕರಿಕೆ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಪವಿತ್ರ ಸ್ಥಳಗಳಾದ ತಲಕಾವೇರಿ, ಭಾಗಮಂಡಲ,ಇಗ್ಗುತಪ್ಪ ದೇವಸ್ಥಾನ,ಎಮ್ಮೆಮಾಡು ದರ್ಗಾ ಹಾಗೂ ಪ್ರವಾಸಿ ತಾಣವಾದ ನಾಲ್ಕುನಾಡು ಅರಮನೆ, ಚೇಲಾವರ ಜಲಪಾತ,ತಡಿಯಂಡ ಮೋಳ್‌ಬೆಟ್ಟ, ಕಬ್ಬೆಬೆಟ್ಟ, ಚೊಮಕುಂದ್ ಹೀಗೆ ಹಲವಾರು ಪ್ರಸಿದ್ಧ ಸ್ಥಳಗಳಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರ ಹಾಗೂ ಯಾತ್ರಿಕರ ವಾಹನ ತೆರಳ ಬೇಕಾದರೆ ಇದೆ ರಸ್ತೆಯಲ್ಲೆ ತೆರಳಬೇಕಾಗುತ್ತದೆ.
ಕಾವೇರಿ ತೀರ್ಥೋದ್ಭವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದ್ದು ಲಕ್ಷಾಂತರ ಮಂದಿ ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ,ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ತಮಿಳುನಾಡು,ಕೇರಳ, ಆಂಧ್ರ ಪ್ರದೇಶ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರೂ. ೩ ಕೋಟಿ ಮಂಜೂರಾಗಿದ್ದರೂ ಕೂಡ ಕಾಮಗಾರಿ ಇದುವರೆಗೂ ಆಗದಿರುದಕ್ಕೆ ಕಾರಣ ಮಾತ್ರ ಕಂಡುಕೊಳ್ಳಲಾಗುತ್ತಿಲ್ಲ ೨೦೨೫ರ ಫೆಬ್ರವರಿಯಲ್ಲಿ ಕಾಮಗಾರಿಗೆ ಹಣ ಮಂಜೂರಾಗಿದೆ. ಆದರೆ ಟೆಂಡರ್ ಮಾತ್ರ ಇದುವರೆಗೂ ನಡೆದಿಲ್ಲದಿರುವುದು ಸಂಶಯ ಮೂಡಿಸಿದೆ. ತಲಕಾವೇರಿಗೆ ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಪಾಲಿಬೆಟ್ಟ, ಅಮ್ಮತ್ತಿ, ವೀರಾಜಪೇಟೆ ಜನತೆಗೆ ಬಹಳ ಹತ್ತಿರದ ಮಾರ್ಗ ಇದಾಗಿದ್ದು ಈ ರಸ್ತೆ ದುರಸ್ತಿ ಪಡಿಸಿದರೆ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳುವರು.