ಗೋಣಿಕೊಪ್ಪಲು, ಅ. ೯ : ಗೋಣಿಕೊಪ್ಪಲುವಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯು.ಆರ್. ರಾವ್ ಉಪಗ್ರಹ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಅಂತರರಾಷ್ಟಿçÃಯ ಅಂತರಿಕ್ಷ ವಾರಾಚರÀಣೆÀ-೨೦೨೫ಅನ್ನು ನಡೆಸಲಾಗಿದ್ದು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳು ಹಾಗೂ ವಿದ್ಯಾಸಂಸ್ಥೆಯ ಗಣ್ಯರು ಬಹುಮಾನ ವಿತರಿಸಿದರು.
ರಸಪ್ರಶ್ನೆ: ಲಯನ್ಸ್ ಹೈಸ್ಕೂಲ್ ಕಳತ್ಮಾಡುವಿನ ವಿದ್ಯಾರ್ಥಿಗಳಾದ ಎನ್.ಟಿ. ಸಿದ್ದಾಂತ್, ಬಿ.ಕೆ. ಸಿಂಚನ, ಎ.ಎಸ್. ತಶಾನ್ (ಪ್ರ), ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿಯ ವಿದ್ಯಾರ್ಥಿಗಳಾದ ಹೆಚ್.ಪಿ. ಸನ್ವಿ, ರಸಜ್ಞ ಮಾದಪ್ಪ, (ದ್ವಿ) ಪ್ಲೋಸ್ ಕರ‍್ಮೆಲಿ ಕಾನ್ವೆಂಟ್‌ನ ವಿದ್ಯಾರ್ಥಿಗಳಾದ ಆರೋನ್ ಶಾಂಪುರ್, ಆ್ಯಂಡ್ರಿಯ ಮರ‍್ಲಿ ಮೆನೆಜಸ್(ತೃ), ನಳಂದ ಗುರುಕುಲ ಇಂಟರ್‌ನ್ಯಾಷನಲ್ ಸ್ಕೂಲ್‌ನ ಎಂ. ಕಹಾನ್, ಬಿ.ಸಿ .ಪರ್ಣಿಕ, ಹೆಚ್.ಡಿ. ಪಂಚಾಕ್ಷರಿ (ಸಮಧಾನಕರ), ರೂಟ್ಸ್ ಎಜುಕೇಷನಲ್ ಇನ್ಸಿಟಿಟ್ಯೂಟ್‌ನ ಎಂ.ಕೆ. ಜಗತ್ ಬೋಪಣ್ಣ, ಟಿ.ಟಿ. ತಮನ್ ಸೋಮಯ್ಯ, ಎ.ಎಂ. ಸ್ಪಂದನ ಕಾವೇರಮ್ಮ, (ಸಮಧಾನಕರ) ಬಹುಮಾನ ಪಡೆದುಕೊಂಡರು.
ಭಾಷಣ ಸ್ಪರ್ಧೆ: ಸೆಂಟ್ ಆಂಟೋನಿ ಇನ್ಸಿಟಿಟ್ಯೂಟ್‌ನ ಪೊನ್ನಂಪೇಟೆಯ ಸಿ.ಆರ್. ಜಾಗೃತಿ ಬಿಂದು (ಪ್ರ), ಕೂರ್ಗ್ ಪಬ್ಲಿಕ್ ಸ್ಕೂಲ್‌ನ ವಿವಾನ್ ನಂಜಪ್ಪ (ದ್ವಿ), ವಿದ್ಯಾನಿಕೇತನ ಪಿ.ಯು. ಕಾಲೇಜಿನ ಹರಿಕೃಷ್ಣ ಎಂ .(ತೃ), ಸೆಂಟ್ ಮೈಕಲ್ ಪಿ.ಯು. ಕಾಲೇಜಿನ ಕೆ. ಪ್ರೀತಿ (ಸಮಧಾನಕರ), ಅಪ್ಪಚ್ಚುಕವಿ ವಿದ್ಯಾಲಯ ಪೊನ್ನಂಪೇಟೆಯ ಎಸ್.ಕೆ.ಭವ್ಯ (ಸಮಧಾನಕರ), ಬಹುಮಾನ ಗಳಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆ : ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಎಂ.ಎಸ್. ಮೋಹಿತ್ (ಪ್ರ), ಕ್ಯಾಲ್ಸ್ ವಿದ್ಯಾ ಸಂಸ್ಥೆಯ ಕೆ.ಯು.ಉನ್ಮಯಿ ತಂಗಮ್ಮ (ದ್ವಿ), ಕ್ಯಾಲ್ಸ್ ವಿದ್ಯಾಸಂಸ್ಥೆಯ ಅರಮಣಮಾಡ ದೀಪಾಲಿ ಬೆಳ್ಳಿಯಪ್ಪ (ತೃ), ಕೂರ್ಗ್ ಪಬ್ಲಿಕ್ ಶಾಲೆಯ ಆದಿತ್ರಿ ಎಂ. ಸುವರ್ಣ (ಸಮಧಾನಕರ), ಸಂತ ಥಾಮಸ್ ಶಾಲೆಯ ಅನ್ನಮ್ಯಾರಿ (ಸಮಧಾನಕರ), ಸಾಯಿ ಶಂಕರ್‌ನ ವಿ. ಶ್ರಾವ್ಯ ಸಮಧಾನಕರ ಬಹುಮಾನ ಪಡೆದರು.
ಕಾಪ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ. ಧನ್ಯ ಸುಬ್ಬಯ್ಯ, ಇಸ್ರೋದ ಹಿರಿಯ ವಿಜ್ಞಾನಿ ಸಂಜೀವ್ ಕುಮಾರ್ ರಾಜೇಶ್ವರಿ, ಕಾಪ್ಸ್ ಪ್ರಾಂಶುಪಾಲರಾದ ಡಾ. ಎಂ. ರಾಮಚಂದ್ರನ್, ವಿದ್ಯಾಸಂಸ್ಥೆಯ ಖಜಾಂಚಿ ಎಂ.ಟಿ. ಮಾಚಯ್ಯ, ಪ್ರಮುಖರಾದ ಅಣ್ಣಳಮಾಡ ಮಾನಸ ತಿಮ್ಮಯ್ಯ, ಶಾಂತೆಯAಡ ಟೀನಾ ಮಾಚಯ್ಯ, ಸಾಂಚಿತ ಚಂಗಪ್ಪ, ವೇದಾ ಬೋಪಣ್ಣ, ಕುಲ್ಲಚಂಡ ಶ್ವೇತಾ ಗಣಪತಿ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ ೨೦ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.