ಮಡಿಕೇರಿ, ಅ. ೧೦: ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವ ಅಂಗವಾಗಿ ಸರಕಾರ ತಾ. ೧೭ರಂದು ಕೊಡಗು ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಈ ಹಿಂದಿನ ಆದೇಶದಲ್ಲಿ ತಾ. ೧೮ರಂದು ರಜೆ ಎಂದು ಘೋಷಿಸಲಾಗಿತ್ತು. ಇದೀಗ ತಿದ್ದುಪಡಿ ಮಾಡಿರುವ ಸರಕಾರ ತಾ. ೧೭ರಂದು ರಜೆ ಘೋಷಣೆ ಮಾಡಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.