ಮಡಿಕೇರಿ, ಅ. ೧೦: ಮಡಿಕೇರಿ ದಸರಾದಲ್ಲಿ ವಕೀಲ ಯಕ್ಷಿತ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೊಡಗು ಪೋಲೀಸರ ವಿರುದ್ಧ ಬೆಂಗಳೂರು ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಭಾ ರೆಡ್ಡಿ ಮಾತನಾಡಿ ಮಡಿಕೇರಿಯಲ್ಲಿ ದಸರಾ ದಿನದಂದು ವಕೀಲ ಯಕ್ಷಿತ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿ ಸುಳ್ಳು ದೂರನ್ನು ದಾಖಲಿಸಿದ ಡಿವೈಎಸ್ಪಿ ಸೂರಜ್ ಠಾಣಾಧಿಕಾರಿ ರಾಘವೇಂದ್ರ ಮತ್ತು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೊಲೀಸರ ದೌರ್ಜನ್ಯ ವಿರುದ್ಧ ಬೆಂಗಳೂರು ವಕೀಲರ ಸಂಘ ಮಡಿಕೇರಿಗೆ ಆಗಮಿಸಿ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಘಟನೆಗೆ ಸಂಬAಧಿಸಿದ ಪೊಲೀಸರ ವಿರುದ್ಧ ಮಡಿಕೇರಿಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸುವುದಾಗಿ ಹೇಳಿದರು. ಈ ಸಂದರ್ಭ ಬೆಂಗಳೂರು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್, ಯಕ್ಷಿತ್ ಕೊತ್ತೋಳಿ, ಸಂಘದ ಪದಾಧಿಕಾರಿಗಳು ಇದ್ದರು.