ಗೋಣಿಕೊಪ್ಪಲು, ಸೆ.೧೦ : ಕರ್ನಾಟಕ ಅರಣ್ಯಶಾಸ್ತç ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘವು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ತಮಗಾಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಮೊಳಗಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಿಂದ ಹೊರಟ ವಿದ್ಯಾರ್ಥಿಗಳು ಪೊನ್ನಂಪೇಟೆ ಪಟ್ಟಣಕ್ಕೆ ಆಗಮಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದಲ್ಲದೆ ಅಣಕು ಚಿತ್ರ ಪ್ರದರ್ಶಿಸಿ ತಮ್ಮ ನೋವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು. ಅಲ್ಲದೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರರ ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳು ಕಚೇರಿ ಮುಂದೆ ಧರಣಿ ನಡೆಸಿದರು. ತಹಶೀಲ್ದಾರ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.ಕರ್ನಾಟಕ ಅರಣ್ಯಶಾಸ್ತç ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ೪ನಾ (ಮೊದಲ ಪುಟದಿಂದ) ಅಧ್ಯಕ್ಷ ಅಕ್ಷಯ್ ಕುಮಾರ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸರ್ಕಾರವು ೨೦೦೩ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ.೫೦ರಷ್ಟು ಮೀಸಲಾತಿಯನ್ನು ಒದಗಿಸಿದ ನಂತರ ೨೦೧೨ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ.೭೫ರಷ್ಟು ಹೆಚ್ಚಿಸಲಾಯಿತು.
ನಂತರ ಬಂದ ಹೊಸ ನಿಯಮಗಳಿಂದಾಗಿ ಬಿ.ಎಸ್ಸಿ. ಅರಣ್ಯ ಶಾಸ್ತç ಪದವೀಧರರಿಗೆ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲಿದ್ದ ಶೇ.೭೫ರ ಮೀಸಲಾತಿಯನ್ನು ಶೇ.೫೦ಕ್ಕೆ ಕಡಿಮೆಗೊಳಿಸಿರುತ್ತದೆ. ಈ ಆದೇಶದ ವಿರುದ್ದವಾಗಿ ಟಿ.ಎಂ.ವಿಜಯ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿಯ ಹುದ್ದೆಯ ನೇರ ನೇಮಕಾತಿಯನ್ನು ತೆಗೆದು ಶೇ.೧೦೦ರಷ್ಟು ಹುದ್ದೆಯನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಬೇಕೆಂಬುದರ ಕುರಿತಾಗಿ ಸಲ್ಲಿಸಿದ್ದ ೬ನೇ ಆಡಳಿತ ಸುಧಾರಣೆ ವರದಿಯ ಅಧ್ಯಾಯ ೪ ಅಧಿಸೂಚನೆ ಸಂಖ್ಯೆ ೮೧ನ್ನು ವಜಾಗೊಳಿಸುವಂತೆ ೨೦೨೪ರಲ್ಲಿ ನಡೆದ ಪ್ರತಿಭಟನೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸುವುದರ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿತನಕ ಯಾವುದೇ ವರದಿ ಹಾಗೂ ಆಧಿಸೂಚನೆಗಳು ಹೊರ ಬಂದಿರುವುದಿಲ್ಲ.
ಅರಣ್ಯ ಶಾಸ್ತç ಪದವೀಧರರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ನಮ್ಮ ಸಂಘದ ಕರ್ತವ್ಯವಾಗಿರುತ್ತದೆ. ಉಪವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅರಣ್ಯ ಶಾಸ್ತç ಪದವೀಧರರನ್ನೆ ನೇರ ನೇಮಕಾತಿ ಮಾಡುವುದರ ಮೂಲಕ ಅರಣ್ಯಶಾಸ್ತçದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಸರ್ಕಾರವನ್ನು ಆಗ್ರಹಿಸಿದರು.
ಅರಣ್ಯ ಶಾಸ್ತçವು ಒಂದು ವಿಶೇಷ ಕ್ಷೇತ್ರವಾಗಿದ್ದು ಅರಣ್ಯ ಪರಿಸರ ಶಾಸ್ತç, ಜೀವ ವೈವಿಧ್ಯ ಸಂರಕ್ಷಣೆ, ವೃಕ್ಷಶಾಸ್ತç ವಿಧಾನಗಳು ವನ್ಯಜೀವಿ ನಿರ್ವಹಣೆ ಹವಮಾನ ಬದಲಾವಣೆ ತಡೆಗೆ ಅರಣ್ಯ ನಿರ್ವಹಣೆ, ಅರಣ್ಯ ಸಂಪತ್ತು ಮತ್ತು ಬಳಕೆ ಹಾಗೂ ಸಾಮಾಜಿಕ ಅರಣ್ಯ ನಿರ್ವಹಣೆ ಮುಂತಾದ ವಿವಿಧ ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಈ ವಿಷಯವನ್ನು ಸಮರ್ಥವಾಗಿ ನಿರ್ವಹಿಸಲು ನಿರ್ಧಿಷ್ಟ ಅರಣ್ಯ ಶಿಕ್ಷಣ ಮತ್ತು ತರಬೇತಿ ಹೊಂದಿರುವ ಅಭ್ಯರ್ಥಿಗಳೇ ಅಗತ್ಯ ಎಂದು ರಾಷ್ಟಿçÃಯ ಅರಣ್ಯ ನೀತಿ ಕೂಡ ಇದನ್ನು ಶಿಫಾರಸ್ಸು ಮಾಡುತ್ತಿದೆ.
ಕರ್ನಾಟಕ ಸರ್ಕಾರ ಕೃಷಿ ವಿಶ್ವ ವಿದ್ಯಾಲಯಗಳ ಕೃಷಿ ಮತ್ತು ಸಂಬAಧಿಸಿದ ವಿಜ್ಞಾನಗಳಿಂದ ಪದವಿ ಪಡೆದವರಿಗೆ ಅವರ ಶೈಕ್ಷಣಿಕ ಅರ್ಹತೆಗೆ ನೇರವಾಗಿ ಸಂಬAಧಿಸಿದ ಇಲಾಖೆಗಳಲ್ಲಿ ನೇರ ನೇಮಕಾತಿಯಲ್ಲಿ ಶೇ.೧೦೦ ರಷ್ಟು ಮೀಸಲಾತಿಯನ್ನು ಆಯಾ ಇಲಾಖೆಗಳಲ್ಲಿ ವೃತ್ತಿಪರತೆ ಹೆಚ್ಚಿಸಲು ಒದಗಿಸಿದೆ. ಅರಣ್ಯ ಪದವೀಧರರ ಅವಶ್ಯಕತೆ ಮತ್ತು ಉಪಯುಕ್ತತೆಯನ್ನು ಗುರುತಿಸಿ ತಮಿಳುನಾಡು, ತೆಲಂಗಾಣ, ಕೇರಳ, ಒರಿಸ್ಸಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ನಂತಹ ಇತರೆ ರಾಜ್ಯಗಳು ಸಹ ತಮ್ಮ ಅರಣ್ಯ ಇಲಾಖೆಗಳಲ್ಲಿ ಮೀಸಲಾತಿಯನ್ನು ಒದಗಿಸಿದೆ.
ಅರಣ್ಯ ಪದವೀಧರರ ವಿದ್ಯಾರ್ಥಿಗಳ ವೃತ್ತಿ ಜೀವನದ ಹಿತದೃಷ್ಠಿಯಿಂದ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಉಪ ವಲಯ ಅರಣ್ಯಾಧಿಕಾರಿ, ಹುದ್ದೆಗಳಲ್ಲಿ ಬಿಎಸ್ಸಿ (ಅರಣ್ಯಶಾಸ್ತç) ವನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ ಬಿಎಸ್ಸಿ (ಅರಣ್ಯಶಾಸ್ತç) ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಅರಣ್ಯ ಶಾಸ್ತç ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ಉಪಾಧ್ಯಕ್ಷ ಸುದೀಪ್ ಸಿರಿ ಗೌಡ, ಕಾರ್ಯದರ್ಶಿಗಳಾದ ಅಂಕಿತ್ ದೇವರಾಯ, ವಿಕಾಸ್ ಎ.ಜಿ., ಜಂಟಿ ಕಾರ್ಯದರ್ಶಿ ರಾಘವೇಂದ್ರ ಎಸ್.ಎಂ.,ಕಿಶನ್‌ಗೌಡ, ಖಜಾಂಚಿ ಎಂ.ಯಶಸ್ಸು, ಮಂಜುನಾಥ್ ಡಿ.ಎಂ, ಸಂಚಾಲಕರಾದ ಅನುಷ ಸುರೇಶ್, ಅಕಾಶ್ ಪೂಜಾರಿ ಸೇರಿದಂತೆ ಪದಾಧಿಕಾರಿಗಳಾದ ನಿಶಾಂತ್, ಗಣೇಶ್, ಸಂಗೀತ, ರಾಕೇಶ್, ಮಾರುತಿ, ಅಮೃತ, ಮೋನಿಕ, ವೈಷ್ಣವಿ, ಕಿಶೋರ್, ಶ್ರೀಶೈಲ್ ಮುಂತಾದವರು ಪಾಲ್ಗೊಂಡಿದ್ದರು.