ಮಡಿಕೇರಿ, ಅ. ೧೧: ಕೊಡವರ ಪ್ರತ್ಯೇಕ ಗುರುತು ರಾಷ್ಟಿçÃಯ ಜನಗಣತಿಯಲ್ಲಿ ದಾಖಲಿಕರಣವಾದರೆ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ಪ್ರತಿಪಾದಿಸಿದರು. ಚೆಟ್ಟಳ್ಳಿಯಲ್ಲಿ ಸಿ.ಎನ್.ಸಿ ಸಂಘಟನೆ ವತಿಯಿಂದ ನಡೆದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ಜನಗಣತಿಯಲ್ಲಿ ದಾಖಲಾಗಬೇಕೆಂದರು.
೨೦೨೬-೨೭ ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಅಳವಡಿಸಬೇಕು, ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದರು.
ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು. ಆ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಜನಾಂಗೀಯ ವೈವಿಧ್ಯತೆಯ ಮತ್ತು ಬೃಹತ್ ಸಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಪ್ರಜಾತಂತ್ರ ರಾಷ್ಟçವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟಿçÃಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು ಎಂದರು.
೧೬ನೇ ಕೊಡವ ಮಾನವ ಸರಪಳಿ ತಾ.೨೧ ರಂದು ಮಂಗಳವಾರ ಬೆಳಿಗ್ಗೆ ೧೦.೩೦ ಗಂಟೆಗೆ ಅಮ್ಮತ್ತಿಯಲ್ಲಿ ನಡೆಯಲಿದ್ದು, ೧೭ನೇ ಕೊಡವ ಮಾನವ ಸರಪಳಿ ತಾ. ೨೭ರ ಬೆಳಿಗ್ಗೆ ೧೦.೩೦ ಗಂಟೆಗೆ ಹುದಿಕೇರಿ (ಪುದಿಕೇರಿ)ಯಲ್ಲಿ ನಡೆಯಲಿದೆ ಎಂದು ಎನ್.ಯು. ನಾಚಪ್ಪ ತಿಳಿಸಿದರು.
ಇಲ್ಲಿಯ ತನಕ ಬಿರುನಾಣಿ, ಟಿ. ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವೀರಾಜಪೇಟೆ, ಮೂರ್ನಾಡು, ಚೇರಂಬಾಣೆಯಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗAಡ ಸುಮಿ ಅಪ್ಪಯ್ಯ, ಚೋಳಪಂಡ ತಾಜ ಕಾಳಯ್ಯ, ಪಳಂಗAಡ ಗೀತಾ ಸುಬ್ರಮಣಿ, ಮುಳ್ಳಂಡ ಮಾಯಮ್ಮ, ಬಲ್ಲಾರಂಡ ಸ್ವಾತಿ ನಾಣಯ್ಯ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಪುತ್ತರಿರ ಸೀತಮ್ಮ ಮೊಣ್ಣಪ್ಪ, ಅಡಿಕೇರ ಶಾಂತಿ, ಪುತ್ತರಿರ ಲತಾ ಜೋಯಪ್ಪ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಲ್ಲಂಡ ರತ್ತು ಚೆಂಗಪ್ಪ, ಬಿದ್ದಂಡ ಅಚ್ಚಯ್ಯ, ಕೊಂಗೇಟಿರ ಅನಿಲ್ ಕುಟ್ಟಪ್ಪ, ಬಿದ್ದಂಡ ಮಾದಯ್ಯ, ಕಡೇಮಾಡ ವಿನ್ಸಿ ಅಪ್ಪಯ್ಯ, ಪುತ್ತರಿರ ಕರುಣ್ ಕಾಳಯ್ಯ, ಬಟ್ಟೀರ ವೇಣು ನಾಚಪ್ಪ, ಪುತ್ತರಿರ ಗಣೇಶ್ ಭೀಮಯ್ಯ, ಬಲ್ಲಾರಂಡ ಮೋಟಯ್ಯ, ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ಕಿಶನ್, ಬಟ್ಟೀರ ರಕ್ಷು ಕಾಳಪ್ಪ, ಮುಳ್ಳಂಡ ಸನ್ನಿ ಅಯ್ಯಪ್ಪ, ಮುಳ್ಳಂಡ ಅಂಜನ್ ಮುತ್ತಪ್ಪ, ಮುಳ್ಳಂಡ ಕುಟ್ಟಪ್ಪ, ಪುತ್ತರಿರ ಜಯ ಬೊಳ್ಳಿಯಪ್ಪ, ಐಚೆಟ್ಟಿರ ಉಮೇಶ್ ಮಾಚಯ್ಯ, ಚೋಳಪಂಡ ಪೂವಯ್ಯ, ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ, ಮುಳ್ಳಂಡ ಕಾಶಿ ದೇವಯ್ಯ, ಮಂದನೆರವAಡ ವಸಂತ ನಾಣಯ್ಯ, ಕೆಚ್ಚೆಟ್ಟಿರ ರಾಜ ಉತ್ತಯ್ಯ, ಪುತ್ತರಿರ ರಮೇಶ್ ಮುತ್ತಣ್ಣ, ಬಲ್ಲಾರಂಡ ದೇವ್ ದೇವಯ್ಯ, ಬಟ್ಟೀರ ನೆಹರು ಮಂದಣ್ಣ, ಬದಲೆರ ಕೌಶಿ ಬೊಳ್ಳಿಯಪ್ಪ, ಬಲ್ಲಾರಂಡ ಉದಯ ಉತ್ತಪ್ಪ, ಪುತ್ತರಿರ ನಂಜಪ್ಪ, ಪುತ್ತರಿರ ರವಿ ಮಂದಣ್ಣ, ಬಲ್ಲಾರಂಡ ಅಚ್ಚಯ್ಯ, ಪುತ್ತರಿರ ಗಯನ್ ಹಾಗೂ ಚೋಳಪಂಡ ತಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.