ಮಡಿಕೇರಿ, ಅ. ೧೧: ಕೊಡಗು ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಬಿ.ಬಿ. ಮಾದಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಸಿ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಸೋಮವಾರಪೇಟೆ, ಕುಶಾಲನಗರ, ಸಂಪಾಜೆ, ಶನಿವಾರಸಂತೆ ಸಾಂಘಿಕರಣ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ಈ ಸಂದರ್ಭ ಹಿರಿಯ ಸದಸ್ಯರಾದ ಪಿ.ಎ. ಮಾದಪ್ಪ, ಸದಾನಂದ, ಪಿ.ಜಿ. ಸೋಮಣ್ಣ, ಚಾಲ್ಸ್ ಆಂಬ್ರೋಸ್, ಪಿ.ಎನ್. ದೇವಕಿ ಹಾಗೂ ಎಸ್.ಎಂ. ಶಾರದಾ ಅವರುಗಳನ್ನು ಸನ್ಮಾನಿಸಲಾಯಿತು.