ಚೆಯ್ಯಂಡಾಣೆ, ಅ. ೧೧: ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ನೀಡುವ ಮುಅಲ್ಲಿಂ ಪ್ರಶಸ್ತಿಗೆ ಮೂರ್ನಾಡು ರೇಂಜ್‌ನ ಆಜಾದ್ ನಗರ ಮದರಸ ಅಧ್ಯಾಪಕರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಇವರು ತಾ. ೧೪ ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್.ಜೆ.ಎಂ. ಕೇಂದ್ರ ಸಮಿತಿಯ ಅಧ್ಯಕ್ಷ ಅಮೀನು ಶ್ಯರೀಅಃ ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.