ನಾಪೋಕ್ಲು, ಅ. ೧೧: ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬವೊAದು ರಸ್ತೆಗೆ ವಾಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ಶನಿವಾರ ಜರುಗಿತು.
ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯ ಚೆರಿಯಪರಂಬು- ಕಲ್ಲು ಮೊಟ್ಟೆಗೆ ಸಂಪರ್ಕಿಸುವ ಜಂಕ್ಷನ್ ಸಮೀಪ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬದ ತಂತಿ ತುಂಡಾದ ಪರಿಣಾಮ ಕಂಬ ರಸ್ತೆಗೆ ವಾಲಿ ಆತಂಕಕ್ಕೆ ಎಡೆಮಾಡಿತ್ತು. ವಿಷಯವರಿತ ಇಲ್ಲಿನ ಸೆಸ್ಕ್ ಇಲಾಖೆಯ ಅಧಿಕಾರಿ ಹರೀಶ್ ಹಾಗೂ ಸಿಬ್ಬಂದಿ ಕೂಡಲೇ ವಿದ್ಯುತ್ ಕಂಬವನ್ನು ಸರಿಪಡಿಸಿ ಸಮಸ್ಯೆಯನ್ನು ಬಗೆಹರಿಸಿದರು.