ಮಡಿಕೇರಿ, ಅ. ೧೧: ನಗರ ಶಾಸಕರ ಕಚೇರಿಯಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ದುರಸ್ಥಿಗೊಳಗಾಗಿರುವ ರಸ್ತೆಗಳ ಸಂಪೂರ್ಣ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮಳೆ ನಿಂತ ಕೂಡಲೇ ವಿಳಂಬರಹಿತವಾಗಿ ರಸ್ತೆ ದುರಸ್ತಿಯನ್ನು ಸಮಾರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದು, ಕಾಮಗಾರಿ ಗುಣಮಟ್ಟವಿಲ್ಲದೇ ಹೋದಲ್ಲಿ ಸಂಬAಧಿಸಿದ ಗುತ್ತಿಗೆದಾರರನ್ನೇ ಹೊಣೆಯಾಗಿಸುವಂತೆ ಮಂತರ್ ಸೂಚಿಸಿದರು. ಮಳೆ ಬಿಡುವು ನೀಡುತ್ತಿಲ್ಲವಾದ್ದರಿಂದ ರಸ್ತೆ ಚರಂಡಿ, ಹೆದ್ದಾರಿ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸಂಬAಧಿಸಿದ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದರು.