ಕೂಡಿಗೆ, ಅ. ೧೨: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರದ ಹಾಲು ಉತ್ಪಾದಕರ ಸಹಕಾರ ಸಂಘ ಸಭಾಂಗಣದಲ್ಲಿ ಕುಶಾಲನಗರ ಪಶುಪಾಲನಾ ಇಲಾಖೆಯ ಪಶುವೈದ್ಯ ಆಸ್ಪತ್ರೆ ಹಾಗೂ ತೊರೆನೂರು ಗ್ರಾಮ ಪಂಚಾಯಿತಿ, ಪಶುಪಾಲನಾ ಘಟಕದ ಸಂಯುಕ್ತ ಆಶ್ರಯದಲ್ಲಿ ರೇಬೀಸ್ ರೋಗದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಹಿನ್ನೆಲೆಯಲ್ಲಿ ರೇಬಿಸ್ ರೋಗ ನಿರೋಧಕ ಶಕ್ತಿಯ ಲಸಿಕೆಯನ್ನು ನೀಡಲಾಯಿತು.

ಪಶುಪಾಲನಾ ಇಲಾಖೆಯ ನಿರ್ದೇಶಕ ಡಾ. ಶ್ರೀನಿವಾಸ್ ಚಾಲನೆ ನೀಡಿದರು. ರೇಬಿಸ್ ಚಿಕಿತ್ಸೆ ನೀಡಿದೆ ಇದ್ದರೆ ಆಗುವ ಸಮಸ್ಯೆಗಳ ಬಗ್ಗೆ ಅವರು ತಿಳಿಸಿದರು. ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಲಿಂಗರಾಜ್ ದೊಡ್ಡಮುನಿ, ಕುಶಾಲನಗರ ಪಶು ವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್. ಶಿಂಧೆ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ರಾಜಶೇಖರ್, ಡಾ. ಅಮೃತ್, ಡಾ. ಪ್ರಸನ್ನ, ಡಾ. ಆನಂದ್, ಡಾ. ಸುರೇಶ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಶಶಿಕಲಾ, ವಿನಯ್ ಹಾಜರಿದ್ದರು.

ಈ ಕೇಂದ್ರದಲ್ಲಿ ೮೫. ನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಶಕ್ತಿಯ ಲಸಿಕೆಯನ್ನು ನೀಡಲಾಯಿತು. ಅಕ್ಟೋಬರ್ ೩೦ ರವರೆಗೆ ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಹಾಗೂ ಪಶುಪಾಲನಾ ಕೇಂದ್ರಗಳಲ್ಲಿ ಉಚಿತವಾಗಿ ರೇಬೀಸ್ ಲಸಿಕೆಯನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಆಯಾ ವ್ಯಾಪ್ತಿಯ ಗ್ರಾಮಸ್ಥರು ಪಡೆದುಕೊಳ್ಳುವಂತೆ ಡಾ. ಸಂಜೀವಕುಮಾರ್ ಆರ್. ಶಿಂಧೆ ತಿಳಿಸಿದ್ದಾರೆೆ.