ಚೆಯ್ಯಂಡಾಣೆ, ಅ. ೧೨: ಚಾಮಿಯಾಲ ಗ್ರಾಮದ ಮಸೀದಿ ಹಾಗೂ ಅಂಗನವಾಡಿ ಕೇಂದ್ರದ ಜಾಗದ ವಿಚಾರದಲ್ಲಿ ನಡೆದ ಸಂಘರ್ಷದ ಬಗ್ಗೆ ವೀರಾಜಪೇಟೆಯಲ್ಲಿ ಚಾಮಿಯಾಲ ಮಸೀದಿಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿದರು.

ವೀರಾಜಪೇಟೆಯ ಪರಿವೀಕ್ಷಣಾ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಚಾಮಿಯಾಲ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಮಾತನಾಡಿ, ಕಳೆದ ೪೦ ವರ್ಷಗಳ ಹಿಂದೆ ಗ್ರಾಮದ ಮಸೀದಿಯ ಖಬರ್‌ಸ್ಥಾನಕ್ಕಾಗಿ ವಕ್ಫ್ ಬೋರ್ಡ್ಗೆ ನೀಡಲಾದ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಕ್ತಿಯೊಬ್ಬರು ಸುಳ್ಳು ಪ್ರಕರಣ ದಾಖಲಿಸಿ ಗ್ರಾಮಸ್ಥರಿಗೆ ಕಿರಿಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ೧೫ ವರ್ಷಗಳಿಂದ ಚಾಮಿಯಾಲ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಹಾಗೂ ಖಬರ್‌ಸ್ಥಾನ ಜಾಗಕ್ಕೆ ಸಂಬAಧಪಟ್ಟAತೆ ವೀರಾಜಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಕೂಡ ಗ್ರಾಮದ ವ್ಯಕ್ತಿಯೊಬ್ಬರು ಈ ಜಾಗಕ್ಕೆ ಬೇಲಿ ಹಾಕುತ್ತಿದ್ದಾರೆ ಎಂದರು. ನಾವು ಆ ವ್ಯಕ್ತಿಯ ಜೊತೆ ಇದರ ಬಗ್ಗೆ ವಿಚಾರಿಸಿದಾಗ ಏಕಾಏಕಿ ಇವರು ಹಲವರು ಊರವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ಸಂದರ್ಭ ಗ್ರಾಮದ ಸೈಫುದ್ದೀನ್ ಎಂಬ ಯುವಕನಿಗೆ ಮಹಿಳೆಯೊಬ್ಬರು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ಸಂಬAಧ ವೀರಾಜಪೇಟೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದರು. ಈ ಜಾಗವನ್ನು ಹಿರಿಯರು ೪೦ ವರ್ಷಗಳ ಹಿಂದೆ ವಕ್ಫ್ ಬೋರ್ಡ್ಗೆ ಕೊಟ್ಟಂತಹ ದಾಖಲೆಗಳು ಕೂಡ ನಮ್ಮಲ್ಲಿ ಇದೆ ಎಂದರು.

ಒಂದು ಎಕರೆ ಜಾಗದಲ್ಲಿ ೬೦ ಸೆಂಟ್ಸ್ ಜಾಗವನ್ನು ಗ್ರಾಮದ ಇದೇ ವ್ಯಕ್ತಿ ವಶಪಡಿಸಿಕೊಂಡು ಮನೆ ನಿರ್ಮಿಸಿದ್ದಾರೆ. ಒಂದು ಎಕರೆ ಜಾಗದ ವಿಚಾರ ಕೋರ್ಟ್ನಲ್ಲಿ ಇರುವಾಗ ಸರ್ವೆ ನಂಬರ್ ೨೪೮/೪ ಹಾಗೂ ೨೩೭/ಃ೧ ಇದು ನಮ್ಮ ಮಸೀದಿಯ ಸ್ಮಶಾನದ ಜಾಗವಾಗಿದ್ದು ಇದಕ್ಕೆ ಸರಕಾರದ ಅಧಿಕಾರಿಗಳು ಬಂದು ವ್ಯವಸ್ಥಿತವಾಗಿ ಕೂಲಂಕಷವಾಗಿ ಸರ್ವೆ ಮಾಡಿ ೬೦ ಸೆಂಟ್ಸ್ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಂಡ ಜಾಗವನ್ನು ಕೂಡಲೇ ತಹಶೀಲ್ದಾರ್ ಸಮ್ಮುಖದಲ್ಲಿ ನಮಗೆ ಒದಗಿಸಿ ಕೊಡಬೇಕೆಂದು ಹನೀಫ್ ಆಗ್ರಹಿಸಿದರು.

ಇದೇ ಜಾಗದಲ್ಲಿ ೧೯೯೮ರಲ್ಲಿ ಅಂಗನವಾಡಿ ಕೇಂದ್ರಕ್ಕೆ ಅಡಿಪಾಯ ಹಾಕಿ ೨೦೦೨ ರಲ್ಲಿ ಕಾಮಗಾರಿ ಪೂರ್ಣಗೊಂಡು ಅಂದಿನಿAದ ಇಂದಿನವರೆಗೂ ಅಂಗನವಾಡಿ ಕೇಂದ್ರ ನಡೆಯುತ್ತಿದೆ.

ಅದಲ್ಲದೆ ಅಂಗನವಾಡಿ ದುರಸ್ತಿಯಲ್ಲಿದ್ದು ಈ ವ್ಯಕ್ತಿ ಅಂಗನವಾಡಿಯನ್ನು ಕೂಡ ದುರಸ್ತಿಪಡಿಸಲು ಬಿಡುತ್ತಿಲ್ಲ ಎಂಬ ವಿಚಾರ ತಹಶೀಲ್ದಾರ್‌ಗೆ, ಶಾಸಕರಿಗೆ ಕೂಡ ತಿಳಿಸಿದ್ದೇವೆ. ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹನೀಫ್ ಒತ್ತಾಯಿಸಿದರು.

ಚಾಮಿಯಾಲ ಜಮಾಅತ್ ಸದಸ್ಯರ ಹಂಝ ಕೆ.ಎ. ಮಾತನಾಡಿ, ಚಾಮಿಯಾಲ ಜುಮಾ ಮಸೀದಿಗೆ ಸಂಬAಧಪಟ್ಟ ೧ ಎಕರೆ ಜಾಗದ ವಿಷಯದಲ್ಲಿ ನಡೆದ ಘಟನೆ ನಿಜಕ್ಕೂ ವಿಷಾದನೀಯ. ೧೯೫೩ರಲ್ಲಿ ಮಸೀದಿ ಹಾಗೂ ಅಂಗನವಾಡಿಗೆ ೧ ಎಕರೆ ಜಾಗವನ್ನು ಕುವಲೇರ ಕುಟುಂಬಸ್ಥರು ದಾನವಾಗಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆರೋಪದ ವ್ಯಕ್ತಿಯೊಬ್ಬರಿಗೆ ನಮ್ಮ ಜಮಾಅತ್‌ನಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ಇವರು ಜಮಾಅತ್ ಅಧ್ಯಕ್ಷರ ಮೇಲೆ ಸುಳ್ಳು ಮೊಕ್ಕದ್ದಮೆಯನ್ನು ಕೂಡ ಹೂಡಿದ್ದರು. ಮಸೀದಿಯ ಜಾಗಕ್ಕೆ ರಾತೋರಾತ್ರಿ ಬೇಲಿ ಹಾಕಿದ್ದಾರೆ. ನಂತರ ಮಸೀದಿಯವರು ಹಾಗೂ ಊರವರು ಸೇರಿ ವೀರಾಜಪೇಟೆ ತಹಶೀಲ್ದಾರ್ ಅವರಿಗೆ ಪುಕಾರು ನೀಡಿದ್ದೇವೆ. ನಂತರ ಬೇಲಿ ಹಾಕಿದ್ದನ್ನು ಹಾಗೂ ಗೇಟ್‌ಅನ್ನು ತೆರವುಗೊಳಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಮಾಅತ್ ಮಾಜಿ ಅಧ್ಯಕ್ಷ ಹನೀಫ್ ಪಿ.ಎಂ., ಸದಸ್ಯ ಷಂಶುದ್ದೀನ್ ಕೆ.ಯು., ಕುವಲೆರ ಪತ್ತೆದಾರರ ಪುತ್ರ ಶಾದುಲಿ ಇದ್ದರು.

- ಅಶ್ರಫ್